ಮನೆ ರಾಜ್ಯ ಮೈಸೂರು: ಹಿಂದೆ ಭಾಷೆ ಹೇರಿಕೆ ವಿರೋಧಿಸಿ ಪ್ರತಿಭಟನೆ

ಮೈಸೂರು: ಹಿಂದೆ ಭಾಷೆ ಹೇರಿಕೆ ವಿರೋಧಿಸಿ ಪ್ರತಿಭಟನೆ

0

ಮೈಸೂರು(Mysuru): ರಾಜ್ಯದಲ್ಲಿ ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಕನ್ನಡ ಚಳವಳಿ ಕೇಂದ್ರ ಸಮಿತಿ ಸದಸ್ಯರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರವು ಹಿಂದಿ ಹೇರಿಕೆಯನ್ನು ಕೈಬಿಡಬೇಕು. ಪ್ರಾದೇಶಿಕ ಭಾಷೆಯಾದ ಕನ್ನಡಕ್ಕೆ ಪ್ರಾಧಾನ್ಯತೆ ಕೊಡಬೇಕು. ಕೇಂದ್ರದ ಎಲ್ಲ ಕಚೇರಿಗಳಲ್ಲೂ ಎಲ್ಲ ವ್ಯವಹಾರವನ್ನೂ ಕನ್ನಡದಲ್ಲೇ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಅದಕ್ಕೆ ಚ್ಯುತಿ ಉಂಟಾಗಲು ಬಿಡಬಾರದು ಎಂದರು.

ಮುಖಂಡರಾದ ತಾಯೂರು ವಿಠ್ಠಲಮೂರ್ತಿ, ಸಿದ್ದಲಿಂಗಪ್ಪ, ‍‍ಪಿ.ಸಿ.ನಾಗರಾಜ್‌, ಬಸಪ್ಪ, ಪ್ರಕಾಶ್, ಮಲ್ಲಣ್ಣ ಪಾಲ್ಗೊಂಡಿದ್ದರು.

ಹಿಂದಿನ ಲೇಖನನರಬಲಿ ಪ್ರಕರಣ: ಕೇರಳ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್
ಮುಂದಿನ ಲೇಖನನಂಜನಗೂಡಿನಲ್ಲಿ ಮನೆಗಳ್ಳತನ: ದೂರು ದಾಖಲು