ಮನೆ ಅಪರಾಧ ಟ್ರಸ್ಟಿ ಮಹಿಳೆಯಿಂದ ಕದ್ರಿ ದೇವಾಲಯದ ಹುಂಡಿ ಹಣ ಕಳ್ಳತನ

ಟ್ರಸ್ಟಿ ಮಹಿಳೆಯಿಂದ ಕದ್ರಿ ದೇವಾಲಯದ ಹುಂಡಿ ಹಣ ಕಳ್ಳತನ

0

ಮಂಗಳೂರು: ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಕಾಣಿಕೆ ಹುಂಡಿಯನ್ನು ಎಣಿಸುವ ನೆಪದಲ್ಲಿ ಸಹಕಾರದಿಂದ ನೇಮಕಗೊಂಡ ಬಿಜೆಪಿ ಪಕ್ಷದ ಟ್ರಸ್ಟಿಯಾಗಿರುವ ಮಹಿಳೆಯೊಬ್ಬರು ಹುಂಡಿ ಹಣವನ್ನು ಎಗರಿಸಿರುವ ಆರೋಪ ಕೇಳಿಬಂದಿದೆ.

ಪ್ರತಿ ವರ್ಷದಂತೆ ಈವರ್ಷವೂ ಫೆ.24 ರಂದು ಎಲ್ಲಾ ಟ್ರಸ್ಟಿಗಳು, ಅಧಿಕಾರಿಗಳ ಸಮ್ಮುಖದಲ್ಲಿ ಹಣ ಎಣಿಸುವುದು ವಾಡಿಕೆ. ಈ ಬಾರಿ ಹಣ ಎಣಿಸುತ್ತಿರುವಾಗಲೇ ನಿವೇದಿತಾ ಶೆಟ್ಟಿ ಎಂಬ ಮಹಿಳಾ ಟ್ರಸ್ಟಿಯೊಬ್ಬರು ೫೦೦ ರೂ. ನೋಟಿನ ಕಂತೆಯನ್ನು ಎಗರಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸಂಘ ಪರಿವಾರರದ ಇಬ್ಬರು ಟ್ರಸ್ಟಿಗಳು ಮಹಿಳೆಯನ್ನು ಟ್ರಸ್ಟಿ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದರು. ಅಷ್ಟೇ ಅಲ್ಲದೇ, ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಎಜೆ ಶೆಟ್ಟಿ ತುರ್ತು ಸಭೆ ಕರೆದು ಮಹಿಳೆಯ ಬಳಿ ಸ್ಪಷ್ಟನೆ ಕೇಳಿದ್ದರು.

ಆದರೆ, ವಾರ ಕಳೆದರೂ ಮಹಿಳೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿರಲಿಲ್ಲ. ಈ ನಡುವೆ, ಸಂಘ ಪರಿವಾರದ ಕಡೆಯಿಂದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ, ಜಿಲ್ಲಾಧಿಕಾರಿಗೆ ಹಾಗೂ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೂ ದೂರು ನೀಡಿದ್ದರು. ಇದರಂತೆ, ಸಚಿವೆ ಜೊಲ್ಲೆಯಾಗಿರುವ ಪಿಎ ಆಗಿರುವ ವ್ಯಕ್ತಿ ಕದ್ರಿ ದೇವಸ್ಥಾನದ ಆಡಳಿತಾಧಿಕಾರಿಗೆ ಕರೆ ಮಾಡಿ, ತನಿಖೆಗೆ ಸೂಚಿಸಿದ್ದರು.

ನಂತರ, ಆಡಳಿಧಿಕಾರಿ ತಡಬಡಾಯಿಸಿದ್ದು ವಿಷಯವನ್ನು ಇತರ ಟ್ರಸ್ಟಿಗಳಿಗೆ ತಿಳಿಸಿದ್ದಾರೆ. ಕೆಲಹೊತ್ತಿನಲ್ಲಿ ಬಿಜೆಪಿ ರಾಜಾಧ್ಯಕ್ಷ ನಳಿನ್‌ ಕುಮಾರ್‌, ಮುಜಾರಾಯಿ ಇಲಾಖೆಯ ಸಚಿವರ ಪಿಎಗೆ ಫೋನ್‌ ಕರೆ ಮಾಡಿದ್ದಾರೆ ಎನ್ನಲಾಗಿದ್ದು, ಈ ವಿಷಯಕ್ಕೆ ನೀವು ಕೈಹಾಕುವುದು ಬೇಡ, ನಾವು ನೋಡಿಕೊಳ್ಳುತ್ತೇನೆ ಎಂದಿದ್ದಾರೆ.

ದೇವಸ್ಥಾನದ ಕಾಣಿಕೆ ಹುಂಡಿಯಿಂದಲೇ ಕಳವಾಗಿದೆ ಎನ್ನುವ ಬಗ್ಗೆ ಪಕ್ಷದ ಟ್ರಸ್ಟಿಗಳೇ ದೂರು ನೀಡಿದ್ದರೂ, ಪಕ್ಷದ ಅಧ್ಯಕ್ಷನಾಗಿರುವ ವ್ಯಕ್ತಿ ಒಟ್ಟು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುವುದು ಚರ್ಚೆಗೆ ಕಾರಣವಾಗಿದೆ.