ಮನೆ ಮನರಂಜನೆ 200 ಕೋಟಿ ಕ್ಲಬ್​ ಸೇರಿದ ‘ದಿ ಕಾಶ್ಮೀರ್​ ಫೈಲ್ಸ್​’

200 ಕೋಟಿ ಕ್ಲಬ್​ ಸೇರಿದ ‘ದಿ ಕಾಶ್ಮೀರ್​ ಫೈಲ್ಸ್​’

0

ಮುಂಬೈ: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ಇದೀಗ 200 ಕೋಟಿ ಕ್ಲಬ್​ ಸೇರಿದೆ.

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾ 200.13 ಕೋಟಿ ರೂಪಾಯಿ ಗಳಿಸಿದೆ. ಈ ಬಗ್ಗೆ ಭಾರತೀಯ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.

ಕಡಿಮೆ ಬಜೆಟ್​ನಲ್ಲಿ ನಿರ್ಮಿಸಿರುವ ದಿ ಕಾಶ್ಮೀರ್‌ ಫೈಲ್ಸ್‌ ದಿನಕಳೆದಂತೆ ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆಯುತ್ತಿದೆ. ಸಿನಿಮಾದಲ್ಲಿ ಅನುಪಮ್​ ಖೇರ್​, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪುನೀತ್ ಇಸ್ಸಾರ್, ಮೃಣಾಲ್ ಕುಲಕರ್ಣಿ ಮತ್ತು ಇತರರು ನಟಿಸಿದ್ದಾರೆ.

ಉತ್ತರ ಪ್ರದೇಶ, ತ್ರಿಪುರಾ, ಗೋವಾ, ಹರಿಯಾಣ ಮತ್ತು ಉತ್ತರಾಖಂಡ, ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲಾಗಿದೆ.

ಹಿಂದಿನ ಲೇಖನರವೀಂದ್ರ ಜಡೇಜಾ ಸಿಎಸ್ ಕೆ ನೂತನ ಕ್ಯಾಪ್ಟನ್
ಮುಂದಿನ ಲೇಖನಟ್ರಸ್ಟಿ ಮಹಿಳೆಯಿಂದ ಕದ್ರಿ ದೇವಾಲಯದ ಹುಂಡಿ ಹಣ ಕಳ್ಳತನ