ಮನೆ ಅಪರಾಧ ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಮತ್ತೊಬ್ಬ ಆರೋಪಿಯ ಬಂಧನ

ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಮತ್ತೊಬ್ಬ ಆರೋಪಿಯ ಬಂಧನ

0

ಬೆಂಗಳೂರು:  ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.

ಜಮಾನ್ ಉಸ್ಮಾನ್ (44) ಬಂಧಿತ ಆರೋಪಿ.  ಜಮಾನ್ ಉಸ್ಮಾನ್ ನನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿ  ಬೆಂಗಳೂರಿಗೆ ಕರೆತಂದಿದ್ದು, ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ಮಧ್ಯೆ  ಉಸ್ಮಾನ್ ನನ್ನು  8 ದಿನಗಳ ಕಾಲ  ಪೊಲೀಸ್  ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರೆಹಮತ ಉಲ್ಲಾ ಸೇರಿ ಇಬ್ಬರನ್ನ ಪೊಲೀಸರು ಬಂಧಿಸಿದ್ದರು.  ಬಂಧಿತರು ತಮಿಳುನಾಡಿನ ತೌಹೀದ್ ಜಮಾತ್ ಸದಸ್ಯನಾಗಿದ್ದರು.