ಮನೆ ಆರೋಗ್ಯ ಕೋವಿಡ್ ಲಸಿಕೆ ಪಡೆದು  ಅಸ್ವಸ್ಥರಾದ ನಾಲ್ವರು ಬಾಲಕಿಯರು

ಕೋವಿಡ್ ಲಸಿಕೆ ಪಡೆದು  ಅಸ್ವಸ್ಥರಾದ ನಾಲ್ವರು ಬಾಲಕಿಯರು

0

ಸತ್ನಾ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ವಿರುದ್ಧದ ಲಸಿಕೆಯನ್ನು ಪಡೆದ 12 ರಿಂದ 14 ವರ್ಷದೊಳಗಿನ ನಾಲ್ವರು ಬಾಲಕಿಯರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಸದ್ಯ ಬಾಲಕಿಯರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಂಎಚ್‌ಒ) ಡಾ. ಅಶೋಕ್ ಕುಮಾರ್ ಅವ್ಧಿಯಾ ತಿಳಿಸಿದ್ದಾರೆ.

ಆಮ್ದಾರಾ ಪ್ರಾಥಮಿಕ ಕೇಂದ್ರದಲ್ಲಿ ಗುರುವಾರ 12 ರಿಂದ 14 ವರ್ಷದೊಳಗಿನ ಸುಮಾರು 50 ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ನಾಲ್ವರು ತಲೆತಿರುಗಿ ಬಿದ್ದಿದ್ದಾರೆ. ಬಹುಶಃ ಭಯದಿಂದಲೇ ಹೀಗಾಗಿರಬಹುದು ಎಂದು ತಿಳಿಸಿದ್ದಾರೆ.

ಕೂಡಲೇ ನಾಲ್ವರನ್ನು ಮೈಹರ್ ಸಿವಿಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಸತ್ನಾದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರೆಲ್ಲರೂ ಅಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದಿದ್ದಾರೆ.

ಘಟನೆ ಬಗ್ಗೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ತನಿಖೆಗೆ ಸೂಚಿಸಿದೆ.