ಮನೆ ರಾಜಕೀಯ ನಂಜನಗೂಡು: ಮೋದಿ ಆಗಮನಕ್ಕೆ ದಕ್ಷಿಣ ಕಾಶಿಯಲ್ಲಿ ಕ್ಷಣಗಣನೆ

ನಂಜನಗೂಡು: ಮೋದಿ ಆಗಮನಕ್ಕೆ ದಕ್ಷಿಣ ಕಾಶಿಯಲ್ಲಿ ಕ್ಷಣಗಣನೆ

0

ನಂಜನಗೂಡು: ಮೋದಿ ಆಗಮನಕ್ಕೆ ಕ್ಷಣಗಣನೆ. ದಕ್ಷಿಣ ಕಾಶಿಯಲ್ಲಿ ಭರದ ಸಿದ್ದತೆ ಉತ್ತರದ ಕಾಶಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿಗೆ ಭಾನುವಾರ ಆಗಮಿಸುವ ಹಿನ್ನೆಲೆಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಂಜನಗೂಡಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಲಿದ್ದು, ಮೈಸೂರು ಹಾಗೂ ಚಾಮರಾಜನಗರ ಸೇರಿ ಒಟ್ಟು 17 ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ. ವರುಣಾ ಕ್ಷೇತ್ರವನ್ನು ಟಾರ್ಗೆಟ್ ಮಾಡಿಕೊಂಡು ಈ ರ್ಯಾಲಿ ಆಯೋಜಿಸಲಾಗಿದೆ.

ಇಂದು ಸಂಜೆ 4.25ಕ್ಕೆ ನಂಜನಗೂಡಿನ ಎಲಚಗೆರೆಗೆ ಆಗಮಿಸುವ ಮೋದಿಯವರು 5.30ರವರೆಗೆ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಬಳಿಕ ರಸ್ತೆ ಮೂಲಕ ನಂಜನಗೂಡು ನಗರಕ್ಕೆ ತೆರಳಿ 5.45ಕ್ಕೆ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ.

ದೇಗುಲ ಭೇಟಿ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ಉತ್ತರದ ಕಾಶಿಯಿಂದ ದಕ್ಷಿಣದ ಕಾಶಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂಬ ಆಕರ್ಷಕ ಚಿತ್ರಣದ ಮೂಲಕ ಮೋದಿಯವರನ್ನು ಸ್ವಾಗತಿಸಲಾಗುವುದು. ನಂತರ ದೇವಸ್ಥಾನದಿಂದ ರಸ್ತೆ ಮೂಲಕ ಮೈಸೂರಿನ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ದಿಲ್ಲಿ ತಲುಪಲಿದ್ದಾರೆ’ ಎಂದು ರಾಮದಾಸ್ ಹೇಳಿದರು.