ಥಾಣೆ: ಕೌಟುಂಬಿಕ ಕಲಹ ಹಿನ್ನೆಲೆ ಮಗನೇ ಹೆತ್ತ ತಾಯಿಯನ್ನು ಭೀಕರವಾಗಿ ಹತ್ಯೆಗೈದು, ತಂದೆಯ ಮೇಲೆ ಗಂಭೀರವಾಗಿ ಹಲ್ಲೆಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ವಿನಿತಾ ಭಟ್ಕರ್(66) ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ವಿನಿತಾ ತನ್ನ ಪತಿಯೊಂದಿಗೆ ಕೊಪ್ರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಗುರುವಾರ ಜಗಳವಾಡುವ ಸಂದರ್ಭದಲ್ಲಿ ಸಿಟ್ಟಿಗೆದ್ದ ಆರೋಪಿಯು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಡುಗೆ ಮನೆಯ ಚಾಕುವಿನಿಂದ ಪೋಷಕರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಕುವಿನಿಂದ ಮೊದಲು ತನ್ನ ತಾಯಿಯನ್ನು ಇರಿದು ಕೊಂದ ಆರೋಪಿಯು, ನಂತರ ತಂದೆಯನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಘಟನೆಯ ನಂತರ ಆರೋಪಿಯು ಪರಾರಿಯಾಗಿದ್ದು, ಈತನಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ. ಆರೋಪಿಯ ಗುರುತು ಹಾಗೂ ಗಾಯಾಳುವಿನ ಗುರುತು ತಿಳಿದು ಬಂದಿಲ್ಲ