ಮನೆ ಪ್ರವಾಸ ಮೇ ತಿಂಗಳಲ್ಲಿ ಬಜೆಟ್ ಸ್ನೇಹಿ ವಿದೇಶ ಪ್ರವಾಸ ಮಾಡಲು ಈ 4 ದೇಶಗಳು ಉತ್ತಮ

ಮೇ ತಿಂಗಳಲ್ಲಿ ಬಜೆಟ್ ಸ್ನೇಹಿ ವಿದೇಶ ಪ್ರವಾಸ ಮಾಡಲು ಈ 4 ದೇಶಗಳು ಉತ್ತಮ

0

ಮೇ ತಿಂಗಳಲ್ಲಿ ವಿದೇಶ ಪ್ರವಾಸ ಮಾಡಬೇಕು ಎಂದು ಬಯಸುವ ಮಂದಿಗೆ ಲೇಖನದಲ್ಲಿರುವ ದೇಶಗಳು ಬೆಸ್ಟ್ ಎನ್ನಬಹುದು. ಬಜೆಟ್ ಸ್ನೇಹಿ ಹಾಗು ಅತ್ಯುತ್ತಮ ಪ್ರವಾಸಿ ಅನುಭವಗಳನ್ನು ನೀವು ಪ್ರಪಂಚದ ಕೆಲವು ದೇಶದ ಪ್ರವಾಸದಲ್ಲಿ ಪಡೆಯುತ್ತೀರಿ.

Join Our Whatsapp Group

ಬಹುತೇಕರು ವಿದೇಶ ಪ್ರವಾಸ ಎಂದಾಕ್ಷಣ ತುಂಬಾ ದುಬಾರಿ ಎಂದು ಭಾವಿಸುವುದು ಸಹಜ. ಇದು ಸತ್ಯವು ಹೌದು. ಭಾರತದಿಂದ ಕೆಲವು ದೇಶಗಳ ಪ್ರವಾಸ ದುಬಾರಿಯಾಗಿರುತ್ತದೆ. ಆದರೆ ಕಡಿಮೆ ದುಡ್ಡಿನಲ್ಲಿ ನಾವು ಅದ್ಭುತವಾದ ದೇಶಗಳಿಗೆ ಪ್ರವಾಸ ಮಾಡಬಹುದು. ನಮ್ಮ ಭಾರತದಿಂದ ಕೆಲವೇ ಗಂಟೆಗಳಲ್ಲಿ ವಿಮಾನದ ಮೂಲಕ ತಲುಪಬಹುದು.

ಭೂತಾನ್

ಭಾರತದಿಂದ ಬಜೆಟ್ ಸ್ನೇಹಿ ವಿದೇಶ ಪ್ರವಾಸದಲ್ಲಿ ಭೂತಾನ್ ಆ ಪಟ್ಟಿಯಲ್ಲಿ ಇದ್ದೇ ಇರುತ್ತದೆ. ವಾಸ್ತವವಾಗಿ, ಭೂತಾನ್, ಪ್ರಪಂಚದ ಅತ್ಯಂತ ರಮಣೀಯ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ದೇಶದ ಪ್ರವಾಸವನ್ನು ವೀಸಾ ಇಲ್ಲದೆ ಪ್ರಯಾಣಿಸಬಹುದು. ಇಲ್ಲಿ ಡೋಚುಲಾ ಪಾಸ್, ತಿಂಪು, ಫುಯೆನ್ಶೋಲಿಂಗ್, ಮೌಂಟ್ ಜೋಮೊಲ್ಹರಿನಲ್ಲಿ ಟ್ರೆಕ್ಕಿಂಗ್, ಬುಮ್ಡೆಲಿಂಗ್ ವನ್ಯಜೀವಿ ಅಭಯಾರಣ್ಯಗಳಿಗೆ ಭೇಟಿ ನೀಡುವುದನ್ನು ತಪ್ಪಿಸದಿರಿ.

ಮಾರ್ಚ್ ತಿಂಗಳಿನಿಂದ ಮೇ ತಿಂಗಳು ಹಾಗು ಸೆಪ್ಟೆಂಬರ್ ತಿಂಗಳಿನಿಂದ ನವೆಂಬರ್ ತಿಂಗಳ ನಡುವೆ.

ಶ್ರೀಲಂಕಾ

ಭಾರತದ ತಮಿಳುನಾಡು ರಾಜ್ಯಕ್ಕೆ ಸಮೀಪದಲ್ಲಿರುವ ಶ್ರೀಲಂಕಾ ಅಗ್ಗದ ಅಂತಾರಾಷ್ಟ್ರೀಯ ಪ್ರವಾಸವಾಗಿದೆ. ಶ್ರೀಲಂಕಾವು ರಾಮಾಯಣ ಕಾಲದ ಅನೇಕ ಪವಿತ್ರವಾದ ಸ್ಥಳಗಳನ್ನು ಹೊಂದಿದೆ. ಇಲ್ಲಿ ನೋಡಬಹುದಾದ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಬೋಪತ್ ಎಲ್ಲಾ ಜಲಪಾತ, ರಾವಣ ಜಲಪಾತ, ದುನ್ಹಿಂದಾ ಜಲಪಾತ, ಲವರ್ಸ್ ಲೀಪ್ ಜಲಪಾತ, ಸೇಂಟ್ ಕ್ಲೇರ್ ಫಾಲ್ಸ್ ತುಂಬಾನೇ ಜನಪ್ರಿಯವಾಗಿವೆ. ಹಾಗೆಯೇ ಸಿಗಿರಿಯಾ, ಎಲಾ, ನುವಾರಾ ಎಲಿಯಾ, ಮಿರಿಸ್ಸಾ, ಯಾಲಾ ರಾಷ್ಟ್ರೀಯ ಉದ್ಯಾನ ಸೇರಿದಂತೆ ಸಾಕಷ್ಟು ಅತ್ಯುತ್ತಮವಾದ ತಾಣಗಳಿವೆ.

ಈ ದ್ವೀಪ ದೇಶವನ್ನು ವರ್ಷಪೂರ್ತಿ ಭೇಟಿ ನೀಡಬಹುದಾದರೂ, ಡಿಸೆಂಬರ್ನಿಂದ ಮೇ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ.

ಥೈಲ್ಯಾಂಡ್

ಥೈಲ್ಯಾಂಡ್, ವಿಶ್ವದ ಅತ್ಯುತ್ತಮ ಅಂತಾರಾಷ್ಟ್ರೀಯ ಪ್ರವಾಸವಾಗಿದೆ. ಇಲ್ಲಿ ಸುಂದರವಾದ ಕಡಲತೀರಗಳು, ಪ್ರಬಲ ಪರ್ವತಗಳು ಮತ್ತು ಶ್ರೀಮಂತ ದೇವಾಲಯಗಳನ್ನು ನೋಡಬಹುದು. ಭಾರತದಲ್ಲಿನ ಬಜೆಟ್ ಪ್ರಯಾಣಿಕರು ಸಾಮಾನ್ಯವಾಗಿ ಥೈಲ್ಯಾಂಡ್ ಗೆ ಪ್ರಯಾಣಿಸಲು ಬಯಸುತ್ತಾರೆ. ಇಲ್ಲಿ ಕೊಹ್ ಕೂಡ್, ಕೊಹ್ ಲಂಟಾ, ಕೊಹ್ ಮ್ಯಾಕ್, ಕೊಹ್ ಲಿಪ್ ಸೇರಿದಂತೆ ಇನ್ನು ಸಾಕಷ್ಟು ಅದ್ಭುತವಾದ ದ್ವೀಪಗಳಿವೆ.

ಥೈಲ್ಯಾಂಡ್ ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ನಿಂದ ಫೆಬ್ರವರಿಯಾಗಿದೆ. ಮೇ ತಿಂಗಳಲ್ಲಿ ಮಳೆ ಆರಂಭವಾಗುತ್ತದೆ.

ಬಾಲಿ

ಇಂಡೋನೇಷ್ಯಾದ ಅತ್ಯಂತ ಸುಂದರವಾದ ದ್ವೀಪವಾಗಿರುವ ಬಾಲಿ ಕೂಡ ಭಾರತದ ಅಗ್ಗದ ಅಂತಾರಾಷ್ಟ್ರೀಯ ಪ್ರವಾಸವಾಗಿದೆ. ಇಲ್ಲಿ ರಮಣೀಯ ಭತ್ತದ ಟೆರೇಸ್ ಗಳು, ಪರಿಮಳಯುಕ್ತ ಪಾಕಪದ್ಧತಿ, ಬೆರಗುಗೊಳಿಸುವ ಕಡಲತೀರ, ವಿಸ್ತಾರವಾದ ದೇವಾಲಯಗಳು, ಅಂತ್ಯವಿಲ್ಲದ ಕರಾವಳಿ, ವಿಶ್ವದ ಕೆಲವು ಅತ್ಯುತ್ತಮ ಹವಳದ ಬಂಡೆಗಳು, ಜಲಪಾತಗಳನ್ನು ನೋಡಬಹುದು.

ಬಾಲಿಗೆ ಭೇಟಿ ನೀಡಲು ಏಪ್ರಿಲ್ ನಿಂದ ಸೆಪ್ಟೆಂಬರ್ ಉತ್ತಮ ಸಮಯ.