ಮನೆ ತಂತ್ರಜ್ಞಾನ ಅಸಲಿಯಂತೆ ಕಾಣುತ್ತವೆ ನಕಲಿ ಆ್ಯಪ್ ಗಳು!: ಹೊಸ ಮಾಲ್ ವೇರ್ ಬಗ್ಗೆ ಎಚ್ಚರಿಕೆಯಿಂದಿರಿ

ಅಸಲಿಯಂತೆ ಕಾಣುತ್ತವೆ ನಕಲಿ ಆ್ಯಪ್ ಗಳು!: ಹೊಸ ಮಾಲ್ ವೇರ್ ಬಗ್ಗೆ ಎಚ್ಚರಿಕೆಯಿಂದಿರಿ

0

ಇಂಟರ್ ನೆಟ್ ಬಳಕೆದಾರರನ್ನು ಕಾಡುವ ದೊಡ್ಡ ಸಮಸ್ಯೆಗಳಲ್ಲಿ ಮಾಲ್ ವೇರ್ ದಾಳಿಯೂ ಒಂದು. ಈಗಂತು ಈ ಮಾಲ್ ವೇರ್ ವೈರಸ್ ದಾಳಿಗಳ ಪ್ರಮಾಣ ಅಧಿಕವಾಗುತ್ತಲೇ ಇದೆ. ಅಂದರೆ ಕಂಪ್ಯೂಟರ್ ಅಥವಾ ನೆಟ್ ವರ್ಕ್ನಿಂದ ಬಳಕೆದಾರರ ಡೇಟಾವನ್ನು ಹಾನಿ ಮಾಡಲು ಅಥವಾ ಸೂಕ್ಷ್ಮ ಮಾಹಿತಿಗಳನ್ನು ಕಳ್ಳತನ ಮಾಡುವ ದುರುದ್ದೇಶಹೊಂದಿರುವ ವೈರಸ್ ಅನ್ನು ಬಳಸುವ ಅಥವಾ ಹರಡುವ ಕ್ರಿಯೆಯೇ ಮಾಲ್ ವೇರ್ ದಾಳಿ. ಸೈಬರ್ ಅಪರಾಧಿಗಳು ಸದಾ ಇಂತಹ ದುರುದ್ದೇಶಪೂರಿತ ಯೋಚನೆಯಲ್ಲಿಯೇ ಮುಳುಗಿರುತ್ತಾರೆ. ಹೀಗಾಗಿ, ಇಂತಹ ದಾಳಿಗಳಿಂದ ನಮ್ಮ ಸಾಧನಗಳನ್ನು ರಕ್ಷಿಸಿಕೊಳ್ಳುವುದು ಕೂಡಾ ಬಹಳ ಅಗತ್ಯಗಳಲ್ಲಿ ಒಂದಾಗಿದೆ.

Join Our Whatsapp Group

ಹೊಸ ಮಾಲ್ ವೇರ್!

ಈಗ ಸಂಶೋಧಕರು ಹೊಸ ಅತ್ಯಾಧುನಿಕ ಮಾಲ್ ವೇರ್ ಕ್ಯಾಂಪೇನ್ ನ ವಿಷಯವನ್ನು ಬಹಿರಂಗಪಡಿಸಿದ್ದಾರೆ. DogeRAT (ರಿಮೋಟ್ ಆಕ್ಸೆಸ್ ಟ್ರೋಜನ್) ಎಂದು ಕರೆಯಲ್ಪಡುವ ಹೊಸ ಆಂಡ್ರಾಯ್ಡ್ ವೈರಸ್ ಇದು. ನಕಲಿ ಆ್ಯಪ್ ಗಳ ಮೂಲಕ ಈ ಮಾಲ್ ವೇರ್ ಹರಡುತ್ತಿದೆ ಎಂಬುದು ಇನ್ನೊಂದು ಆತಂಕಕಾರಿ ವಿಷಯ. ನಾವು ನೀವೆಲ್ಲಾ ಬಳಸುವ ಕಾನೂನುಬದ್ಧವಾದ ಅಸಲಿ ಆ್ಯಪ್ ಗಳಂತೆಯೇ ವಿನ್ಯಾಸಗೊಳಿಸಲಾದ ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಗಳ ವಿತರಣೆಯ ಮೂಲಕ ಈ ಮಾಲ್ ವೇರ್ ಕ್ಯಾಂಪೇನ್ ಪ್ರಕ್ರಿಯೆ ನಡೆಯುತ್ತಿದೆ. ಸೈಬರ್ ಹ್ಯಾಕರ್ ಗಳು ಮಾಲ್ ವೇರ್ ಅನ್ನು ಥೇಟ್ ಯುಟ್ಯೂಬ್, ನೆಟ್ ಫ್ಲಿಕ್ಸ್, ಇನ್ಸ್ಟಾಗ್ರಾಂ, ಓಪೆರಾ ಮಿನಿ ಮತ್ತು ಇತರ ಆಂಡ್ರಾಯ್ಡ್ ಅಪ್ಲಿಕೇಶನ್ಗಳಂತೆ ಕಾಣುವ ನಕಲಿ ಆ್ಯಪ್ಗಳ ಮೂಲಕ ಹರಡುತ್ತಿದ್ದಾರೆ.

ಈ ಆಂಡ್ರಾಯ್ಡ್ ಮಾಲ್ ವೇರ್ ಹಲವಾರು ದುರುದ್ದೇಶಪೂರಿತ ಚಟುವಟಿಕೆಗಳನ್ನು ನಡೆಸುತ್ತದೆ. ಡೇಟಾ ಕಳ್ಳತನ, ದಾಳಿಕೋರರಿಂದ ಅನಧಿಕೃತ ಬಳಕೆ ಅಥವಾ ಅನಗತ್ಯ ಜಾಹೀರಾತುಗಳನ್ನು ಹರಡುವುದು ಹೀಗೆ ನಾನಾ ಚಟುವಟಿಕೆಗಳಿಗೆ ಇದು ಕಾರಣವಾಗುತ್ತದೆ.

ಕ್ಲೌಡ್ ಸೆಕ್ ವರದಿ ಪ್ರಕಾರ, ಸೂಕ್ಷ್ಮಮಾಹಿತಿಯನ್ನು ಕದಿಯಲು ಮತ್ತು ಬಳಕೆದಾರರ ಡಿವೈಸ್ನ ಭದ್ರತೆಯನ್ನು ದುರ್ಬಲಗೊಳಿಸಲು DogeRAT ಆಂಡ್ರಾಯ್ಡ್ ಮಾಲ್ ವೇರ್ನ್ನು ಬಳಸಿಕೊಳ್ಳುತ್ತಿದೆ. ಈ ಮಾಲ್ ವೇರ್ ದಾಳಿ ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ಇನ್ಶೂರೆನ್ಸ್ ಸೇರಿದಂತೆ ಇ-ಕಾಮರ್ಸ್ ಹಾಗೂ ಮನರಂಜನೆ ಸೇರಿ ಹಲವು ಉದ್ಯಮಗಳ ಮೇಲೆ ಪರಿಣಾಮ ಬೀರುತ್ತದೆ.

ಈ ಮಾಲ್ ವೇರ್ ಹರಡಲು ಸೋಶಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಪ್ಲಾಟ್ಫಾರ್ಮ್ ಗಳನ್ನು ಬಳಸಲಾಗುತ್ತಿದೆ. ನಾವು ಬಳಸುವ ಅಸಲಿ ಮೊಬೈಲ್ ಫೋನ್ ಅಪ್ಲಿಕೇಶನ್ ಗಳಾದ ಗೇಮ್ ಅಥವಾ ಮನೋರಂಜನಾ ಆ್ಯಪ್ ಗಳಾದ ನೆಟ್ ಫ್ಲಿಕ್ಸ್, ಯುಟ್ಯೂಬ್ ಹೀಗೆ ಥೇಟ್ ಅಸಲಿ ಆ್ಯಪ್ಗಳಂತೆ ಕಾಣುವ ಹಲವು ನಕಲಿ ಅಪ್ಲಿಕೇಶನ್ ಗಳ ಮೂಲಕ DogeRAT ಅನ್ನು ಹರಡಲಾಗುತ್ತದೆ.

DogerRAT ಹೇಗೆ ಅಪಾಯಕಾರಿ?

ಒಂದು ಬಾರಿ DogeRAT ಯಾರಾದರೂ ಒಬ್ಬರ ಡಿವೈಸ್ ನಲ್ಲಿ ಇನ್ ಸ್ಟಾಲ್ ಆದರೆ ಮಾಲ್ ವೇರ್ ಅನಧಿಕೃತವಾಗಿ ಆ ಡಿವೈಸ್ ನ ಮೇಲೆ ಹಿಡಿತ ಸಾಧಿಸುತ್ತದೆ ಹಾಗೂ ಆ ಬಳಕೆದಾರರ ಸಂಪರ್ಕಗಳು, ಅವರ ಮೆಸೇಜ್ ಗಳು ಮತ್ತು ಬ್ಯಾಂಕಿಂಗ್ ಸೇವೆಯ ದಾಖಲೆಗಳು ಹೀಗೆ ಎಲ್ಲಾ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಆರಂಭಿಸುತ್ತದೆ! ಒಮ್ಮೆ DogeRAT ಸಕ್ರಿಯವಾದರೆ ಇದು ಕರೆಗಳ ದಾಖಲೆ, ಆಡಿಯೋ ರೆಕಾರ್ಡಿಂಗ್ ಗಳು, ಎಸ್ ಎಂಎಸ್ ಗಳು, ಮೀಡಿಯಾ ಫೈಲ್ ಗಳು ಮತ್ತು ಇಮೇಜ್ಗಳು ಸೇರಿದಂತೆ ನಿಮ್ಮ ವ್ಯಾಪಕವಾದ ಸೂಕ್ಷ್ಮ ಮಾಹಿತಿ ಮತ್ತು ಕಾರ್ಯಗಳಿಗೆ ಲಗ್ಗೆ ಇಡುತ್ತದೆ. ಜತೆಗೆ ಸ್ಪ್ಯಾಮ್ ಮೆಸೇಜ್ ಗಳನ್ನು ಕಳಿಸುವುದು, ಅನಧಿಕೃತ ಪಾವತಿಗಳನ್ನು ಮಾಡುವುದು, ಫೈಲ್ಗಳನ್ನು ಮಾರ್ಪಡಿಸುವುದು ಮತ್ತು ಸಾಧನದ ಕ್ಯಾಮೆರಾಗಳ ಮೂಲಕ ದೂರದಿಂದಲೇ ಫೋಟೋಗಳನ್ನು ಸೆರೆ ಹಿಡಿಯುವುದು ಸೇರಿದಂತೆ ಹಲವು ದುರುದ್ದೇಶಪೂರಿತ ಚಟುವಟಿಕೆಗಳನ್ನೂ ಸಕ್ರಿಯಗೊಳಿಸುತ್ತದೆ ಎಂದು ವರದಿ ಹೇಳುತ್ತದೆ.

ಇವುಗಳು ಕೇವಲ ವೆಬ್ ಸೈಟ್ ನ ಸೂಕ್ಷ್ಮಮಾಹಿತಿಗಳನ್ನು ಮಾತ್ರ ಕದಿಯಲು ಸೀಮಿತವಾಗಿಲ್ಲ, ಬದಲಾಗಿ ವಂಚನೆಯ ಈ ಜಾಲದ ಉದ್ದೇಶವನ್ನು ಕಾರ್ಯಗತಗೊಳಿಸುವ ಸಲುವಾಗಿ ಮಾಡಿಫೈ ಅಥವಾ ಮಾರ್ಪಾಡು ಮಾಡಲಾದ RATಗಳು ಅಥವಾ ದುರುದ್ದೇಶಪೂರಿತ ಅಪ್ಲಿಕೇಶನ್ ಗಳ ವಿತರಣೆಯನ್ನೂ ಮಾಡುತ್ತಿದೆ ಎನ್ನಲಾಗಿದೆ.

DogeRATನಿಂದ ನಿಮ್ಮ ಡಿವೈಸ್ ನ ರಕ್ಷಣೆ ಹೇಗೆ?

ಗೊತ್ತಿಲ್ಲದ ಲಿಂಕ್ ಮತ್ತು ಅಟ್ಯಾಚ್ ಆದ ಫೈಲ್ ಗಳ ಬಗ್ಗೆ ಎಚ್ಚರವಿರಲಿ

ನಿಮ್ಮ ಡಿವೈಸ್ ನ ಸಾಫ್ಟ್ ವೇರ್ ಅನ್ನು ನವೀಕೃತವಾಗಿರಿಸಿ ಅಥವಾ ಅಪ್ ಡೇಟ್ ಮಾಡಿಟ್ಟುಕೊಳ್ಳಿ

ವೈರಸ್ ದಾಳಿಯನ್ನು ತಡೆಯುವ ವಿಶ್ವಾಸಾರ್ಹ ಭದ್ರತಾ ಪರಿಹಾರ ಕ್ರಮಗಳನ್ನೂ ಬಳಸಿ

ವಂಚನೆಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಅನುಮಾನಾಸ್ಪದ ಲಿಂಕ್ ಗಳು/ಅಟ್ಯಾಚ್ಮೆಂಟ್ ಗಳ ಬಗ್ಗೆ ಎಚ್ಚರವಾಗಿರಿ

ಮಾಲ್ ವೇರ್ ದಾಳಿಗಳ ಬಗ್ಗೆ ಸಾಧ್ಯವಾದಷ್ಟು ಹೆಚ್ಚೆಚ್ಚು ವಿಷಯಗಳನ್ನು ಅರಿತುಕೊಳ್ಳಿ

ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿ

ಹಿಂದಿನ ಲೇಖನಕೋಪ ಬಂದಾಗ ಕಟುವಾಗಿ ಮಾತನಾಡುವವರು ಈ ರಾಶಿಯವರೇ..!
ಮುಂದಿನ ಲೇಖನ‘ಪಿಂಕಿ ಎಲ್ಲಿ?’: ಚಿತ್ರ ವಿಮರ್ಶೆ