ಮೈಸೂರು: ವೈದ್ಯಕೀಯ ಕ್ಷೇತ್ರದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಿ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ದಾದಿಯರ ಕೊಡುಗೆ ಅನನ್ಯವಾಗಿದೆ. ಸಮಾಜ-ಆರೋಗ್ಯ ಕ್ಷೇತ್ರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹೇಳಿದರು.
ನಗರದ ನ್ಯೂ ಸಯ್ಯಾಜಿರಾವ್ ರಸ್ತೆ ಯಲ್ಲಿರುವ ಸ್ಪಂದನ ಆಸ್ಪತ್ರೆಯಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ’ಯ ಪ್ರಯುಕ್ತ ಕೇಕ್ ಕತ್ತರಿಸಿ ಆನಂತರ ಆಸ್ಪತ್ರೆಯ ಎಲ್ಲಾ ದಾದಿಯರಿಗೆ ಏರ್ಪಡಿಸಿದ್ದ ಗೌರವಿಸಿ ಅವರು ಮಾತನಾಡಿದರು.
ರೋಗಿಯ ಜೊತೆ ನಿರಂತರವಾಗಿದ್ದು, ಉಪಚಾರ ಮಾಡುವ ಮೂಲಕ ರೋಗವನ್ನು ಗುಣಪಡಿಸುತ್ತಾರೆ. ಅವರ ಸೇವೆಯನ್ನು ಕಾಯಂಗೊಳಿಸಿ, ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿದ್ದು, ಇದರತ್ತ ಲಕ್ಷವಹಿಸಬೇಕಾಗಿದೆ ಎಂದರು.
ದಾದಿಯರ ಸೇವೆ ನಿರಂತರ ಮತ್ತು ಜವಬ್ದಾರಿಯುತವಾಗಿದೆ. ಪ್ರತಿ ವರ್ಷ ‘ಮೇ-12’ನ್ನು ‘‘ವಿಶ್ವ ದಾದಿಯರ ದಿನಾಚರಣೆ’’ಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ವಿಶ್ವದ್ಯಾದಂತ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಸ್ಮರಿಸುವ ಉದ್ದೇಶವಾಗಿದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ಇದಾಗಿದ್ದು, ಅವರು ಆಧುನಿಕ ನರ್ಸಿಂಗ್ ಶಿಕ್ಷಣಕ್ಕೆ ಬುನಾದಿಯನ್ನು ಹಾಕಿ ಸಂಘಟನೆಯನ್ನು ಮಾಡಿದ್ದಾರೆ. ನೈಟಿಂಗೇಲ್ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.
ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ದಾದಿಯರಾದ ಶಿವಕುಮಾರ್ ರಂಜಿತಾ ರಾಜಮ್ಮ ಭೂಮಿಕಾ ಸ್ಮಿತಾ ಶಿಲ್ಪಾ ಜಿ.ಎಸ್, ಸುಮಾ ಅವರಿಗೆ ಕೇಂದ್ರದಲ್ಲಿ ಸತ್ಕರಿಸಿ, ಶುಭಾಷಯ ಕೋರಲಾಯಿತು.
ಇದೇ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವೈದ್ಯರಾದ ಡಾಕ್ಟರ್ ನಿವೇದಿತಾ, ರಶ್ಮಿ, ಸುರೇಶ್, ರಾಜೀವ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.