ಮನೆ ಭಾವನಾತ್ಮಕ ಲೇಖನ ಅಸ್ತಿತ್ವದಲ್ಲಿಲ್ಲದರ ಬಗ್ಗೆ ಕೊರಗು ಏಕೆ ?

ಅಸ್ತಿತ್ವದಲ್ಲಿಲ್ಲದರ ಬಗ್ಗೆ ಕೊರಗು ಏಕೆ ?

0

ಆನಂದ. ಎಲ್ಲರ ಬದುನಕಿನಲ್ಲೂಬಹಳ ಅಮೂಲ್ಯವಾದ ಪದವದು. ಸಂತೋಷ ಹಾಗೂ ಶಾಂತಿ, ನೆಮ್ಮದಿಯನ್ನು ಪಡೆಯುವುದೇ ಜೀವನದ ಅಂತಿಮ ಗುರಿ ಎಂಬುದು ಎಲ್ಲರ ಆಲೋಚನೆ. ಹಾಗೂ ಅದನ್ನೇ ಹುಡುಕಿಕೊಳ್ಳಲು ಏನೇನೋ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.

ಸಂತೋಷವನ್ನು ಹುಡುಕುವವರ ಸಮಸ್ಯೆ ತುಂಬಾ ಸರಳವಾಗಿದೆ. ಸುತ್ತಮುತ್ತಲಿನಲ್ಲಿರುವವರಿಗೆ ಏನು ಬೇಕು ಎಂಬುದು ನಮಗದು ಚರ್ಚಿತ ವಿಷಯ ಅಲ್ಲದೇ ಇರಬಹುದು. ಆದರೆ ನನಗೇನು ಬೇಕು ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಜೀವನಪೂರ್ತಿ ನಮಗೆ ಬೇಕಾಗಿರುವುದು ‘ಸಂತೋಷ’ವೇ ಆ ಪ್ರಶ್ನೆಗೆ ಉತ್ತರ ಆಗಿರುತ್ತದೆ.

ಮನಸ್ಸಿನ ಆರೋಗ್ಯ

ಸಂತೋಷದಿಂದಿದ್ದರೆ ಮೆದುಳು ಮತ್ತು ದೇಹ ಎರಡೂ ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದಕ್ಕೆ ಹÇವಾರು ವೈದ್ಯಕೀಯ ವರದಿಗಳು ಇಂಬು ನೀಡುತ್ತವೆ. ಯಾವುದೇ ಕಿರಿಕಿರಿ, ಕೋಪ, ಆತಂಕ ಇಲ್ಲದೇ ದಿನಪೂರ್ತಿ ಕಳೆಯುವಿರಾದರೆ ನಮ್ಮ ಬುದ್ಧಿಮತ್ತೆಯ ಸಾಮರ್ಥ್ಯವು ಹೆಚ್ಚಿರುತ್ತದೆ. ಆದರೆ ವ್ಯಕ್ತಿಯೊಬ್ಬ ತನ್ನ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವುದರಿಂದ ಮನಸ್ಸು ಹಾಗೂ ದೈಹಿಕ ಸಮಸ್ಯೆಗಳು ತನ್ನಿಂತಾನೆ ಕಾಣಿಸಿಕೊಳ್ಳುತ್ತವೆ. ಅದರಿಂದಲೇ ಇರುವ ಸುಖವನ್ನೂ ಕಳೆದುಕೊಳ್ಳುತ್ತಾರೆ.

ನಮಗೆ ಜೀವನದಲ್ಲಿಬಹಳ ಅಮೂಲ್ಯ ಎನಿಸಿದ್ದು ಅಂದರೆ ಕುಟುಂಬ, ಉದ್ಯಮ, ಸಂಪತ್ತು, ಆರೋಗ್ಯ ಎಲ್ಲವನ್ನು ನಿರ್ವಹಣೆ ಮಾಡುವವರು ಒತ್ತಡವನ್ನು ಯಾಕೆ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲಎನ್ನುವ ಪ್ರಶ್ನೆ ಕಾಡಬಹುದು.

ಬುದ್ಧಿವಂತಿಕೆ, ಆಲೋಚನಾ ಶಕ್ತಿ ಹಾಗೂ ಜಾಗೃತಿಯ ಮನಸ್ಥಿತಿ ಹೊಂದಿರುವ ಮಾನವ ಈ ಜಗತ್ತಿನಲ್ಲಿವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾನೆ. ಆ ವಿಶಿಷ್ಟ ಗುಣಗಳೇ ಮನುಷ್ಯನಿಗೆ ಕೆಲವೊಮ್ಮೆ ಸಮಸ್ಯೆ ತಂದೊಡ್ಡುತ್ತಿದೆ. ಬುದ್ಧಿವಂತಿಕೆ ಇರುವುದರಿಂದಲೇ ಕೆಲವೊಮ್ಮೆ ಕೆಲವರಿಗೆ ಯಾವುದರಲ್ಲೂಸ್ಥಿರತೆಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಂತೋಷವಾಗಿ ಇರುವುದು ಕೂಡಾ ಒಂದು ಸವಾಲಾಗಿ ಪರಿಣಮಿಸಿದೆ. ಹತ್ತು ವರ್ಷಗಳ ಹಿಂದೆ ನಡೆದ ಘಟನೆ ಬಗ್ಗೆ ಈಗಲೂ ಚಿಂತಿಸುತ್ತಾ ಕುಳಿತರೆ ಸಂತೋಷವನ್ನು ಕಂಡುಕೊಳ್ಳುವುದಕ್ಕೆ ಹೇಗೆ ಸಾಧ್ಯ? ಮಾತ್ರವಲ್ಲನಾಳೆ ಏನಾಗಲಿದೆ ಎನ್ನುವುದರ ಬಗ್ಗೆಯೂ ಮನುಷ್ಯ ಚಿಂತೆ ಮಾಡುತ್ತಾ ಕಾಲ ಕಳೆಯುತ್ತಾನೆ. ವಾಸ್ತವ ಅಂದರೆ ಈ ಕ್ಷಣದ ಸುಂದರ ಗಳಿಗೆಯನ್ನು ಆನಂದಿಸಲು ಭವಿಷ್ಯ ಹಾಗೂ ಭೂತಕಾಲದ ಚಿಂತೆಗಳು ಅಡ್ಡಿಪಡಿಸುತ್ತವೆ. ಅದನ್ನೇ ಇನ್ನೊಂದು ಅರ್ಥದಲ್ಲಿಹೇಳುವುದಾದರೆ ‘ಯಾವುದು ಅಸ್ತಿತ್ವದಲ್ಲಿಲ್ಲವೋ ಅದರ ಬಗ್ಗೆಯೇ ಯಾಕೆ ದುಃಖಿತರಾಗಬೇಕು?’ ಎಂದು.

ತನ್ನೊಳಗಿದ್ದಾನೆ ಮಾರ್ಗದರ್ಶಕ

ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿರುತ್ತದೆ, ನಾನು ತಾನು ಹೇಗಿರಬೇಕು, ಸಾಮಾಜಿಕವಾಗಿ ಅಂತರಂಗದಲ್ಲಿನ ಸಂತೋಷವನ್ನು ಕಂಡುಕೊಳ್ಳಲು ಏನು ಮಾಡಬೇಕು ಎಂಬುದನ್ನು ತೋರಿಸಿಕೊಡುವ ಮಾರ್ಗದರ್ಶಕ ನಮ್ಮೊಳಗೇ ಇದ್ದಾನೆ. ಅದನ್ನು ಸರಿಯಾದ ರೀತಿಯಲ್ಲಿಬಳಸಿಕೊಳ್ಳಲಾಗದೇ ಮನುಷ್ಯ ಒಂದು ರೀತಿಯಲ್ಲಿಅಸ್ತವ್ಯಸ್ತಗೊಂಡಿದ್ದಾನೆ. ನಮ್ಮ ಮನಸ್ಸು ಮತ್ತು ಆಲೋಚನಾಕ್ರಮಗಳಂತೆ ಸರಿಯಾದುದನ್ನೇ ಆಯ್ಕೆ ಮಾಡಿಕೊಂಡರೆ ಬದುಕೂ ಕೂಡಾ ಸಂತೋಷದಿಂದ ಕೂಡಿರುತ್ತದೆ.

ಅದಕ್ಕಾಗಿ ಬದಲಾವಣೆ ತಂದುಕೊಳ್ಳಿ. ಬಾಹ್ಯ ವಸ್ತುಗಳಿಂದ ಸಂತೋಷ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯ ಇಲ್ಲ. ನಮ್ಮ ಅಸ್ತಿತ್ವ ಇರುವವರೆಗೆ ಆಂತರಿಕ ಸ್ವರೂಪವನ್ನು ಕಂಡುಕೊಳ್ಳುವುದು ಮತ್ತು ಸರಿಯಾದ ರೀತಿಯಲ್ಲಿಸಂಘಟಿಸುವುದರಿಂದ ಆನಂದವನ್ನು ಹೊಂದಬಹುದು. ಹಾಗಾಗಿ ಸಂತೋಷ ಎಂಬುದು ಇನ್ನೆಲ್ಲೋ ಸಿಗುವ ವಸ್ತುವಲ್ಲ. ನಮ್ಮೊಳಗೇ ಕಂಡುಕೊಳ್ಳುವುದಾಗಿದೆ.

ಹಿಂದಿನ ಲೇಖನಕೋರಮಂಗಲ ಡಬಲ್ ಮರ್ಡರ್ ಕೇಸ್: ಮೂವರು ಆರೋಪಿಗಳ ಬಂಧನ
ಮುಂದಿನ ಲೇಖನಮೈಸೂರಿನ ಪ್ರಾಥಮಿಕ ಕೇಂದ್ರದಲ್ಲಿ ಹಣ ವಸೂಲಿ ಆರೋಪ: ವೈದ್ಯಾಧಿಕಾರಿ ಅಮಾನತು