ಮನೆ ಮನರಂಜನೆ ಬದುಕಿನ ದರಿದ್ರ ದಿನಗಳನ್ನು ನೆನಪಿಸಿಕೊಂಡ ಅನುಪಮಾ ಗೌಡ

ಬದುಕಿನ ದರಿದ್ರ ದಿನಗಳನ್ನು ನೆನಪಿಸಿಕೊಂಡ ಅನುಪಮಾ ಗೌಡ

0

ಬಾಲ ನಟಿಯಾಗಿ ನಟಿಸಿ ಬಳಿಕ ಧಾರವಾಹಿಗಳ ಮೂಲಕ ನಟನೆಗಿಳಿದ ಅನುಪಮಾ ಗೌಡ ಸದಾ ಕಾರ್ಯಕ್ರಮಗಳಲ್ಲಿ ನಗುತ್ತಾ, ಪಟ ಪಟ ಮಾತನಾಡುತ್ತಾ ಇರುತ್ತಾರೆ.
ಆದರೆ ಇವರನ್ನು ಬೆಂಕಿಯಲ್ಲಿ ಅರಳಿದ ಹೂವು ಎಂದರೂ ಅತಿಶೋಕ್ತಿಯಲ್ಲ.

Join Our Whatsapp Group

ಹಿಂದೊಮ್ಮೆ ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದ ಅನುಪಮಾ ಗೌಡರ ಜೀವನ ಪ್ರತಿಯೊಬ್ಬನಿಗೂ ಸ್ಪೂರ್ತಿ. ಇವರ ತಂದೆ ಸಿನಿಮಾಗಳಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದವರು. ಆದರೆ ಆ ಕೆಲಸದಿಂದ ಸಾಕಷ್ಟು ಆದಾಯ ಬರುತ್ತಿರಲಿಲ್ಲ. ತಾಯಿ ಗಾರ್ಮೆಂಟ್ಸ್ ಗಳಲ್ಲಿ ದುಡಿಯುತ್ತಿದ್ದರು. ಕುಟುಂಬದ ಜವಾಬ್ದಾರಿ ಹೊರಬೇಕಾದ ತಂದೆ ದಾರಿ ತಪ್ಪಿ ಬಿಟ್ಟರು..!!

ತಂದೆ-ತಾಯಂದಿರ ದುಡಿಮೆಯಿಂದ ಬರುತ್ತಿದ್ದ ಹಣದಿಂದ ಜೀವನ ಸಾಗಿಸುವುದು ಕಷ್ಟವಾಗಿತ್ತು. ಕುಡಿತದ ಚಟಕ್ಕೆ ಬಿದ್ದ ತಂದೆ ದಿನಪೂರ್ತಿ ಮದ್ಯದ ಅಮಲಿನಲ್ಲೇ ಇರುತ್ತಿದ್ದರು. ಮನೆ, ಹೆಂಡತಿ, ಮಗಳನ್ನು ಮರೆತಿದ್ದ ತಂದೆಯಿಂದಾಗಿ ದಿನಾ ಅನುಪಮಾ ಹಾಗೂ ಅವರ ತಾಯಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರು.

ಈ ಎಲ್ಲಾ ಕಾರಣಗಳಿಂದ ಅನುಪಮಾ ಗೌಡ 6 ನೇ ತರಗತಿಯಲ್ಲೇ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟರಂತೆ. ಬದುಕಿಗಾಗಿ ಮನೆ ಮನೆಯಲ್ಲಿ ಪಾತ್ರೆ ತೊಳೆಯಲು ಕೂಡ ಅನುಪಮಾ ಗೌಡ ತೆರಳುವಂತಾಯಿತು. ಇದೇ ವೇಳೆ ಅವರ ತಂದೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸುವ ಅವಕಾಶ ಅನುಪಮಾಗೆ ದೊರೆಯಿತು. ಅನಂತರ ಚಿಕ್ಕ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಲು ಆರಂಭಿಸುತ್ತರೆ.

ಮುಂದೆ ಅವರಿಗೆ ಅಕ್ಕಾ ಎಂಬ ಧಾರಾವಾಹಿಯಲ್ಲಿ ಅವಕಾಶ ಲಭಿಸಿ ಅದರಲ್ಲಿ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ನಂತರ ಚಿ.ಸೌ.ಸಾವಿತ್ರಿ ಧಾರಾವಾಹಿಯಲ್ಲೂ ಅವಕಾಶ ಲಭಿಸುತ್ತದೆ. ಮುಂದೆ ಬಿಗ್ ಬಾಸ್, ಸಿನಿಮಾಗಳಲ್ಲಿ ಸ್ಪರ್ಧಿ ಹಾಗೂ ನಟಿಯಾಗಿ ಕರುನಾಡಿಗೆ ಚಿರಪರಿಚಿತರಾಗುತ್ತಾರೆ.

ಪ್ರಮುಖ ವಿಚಾರವೆಂದರೆ ಮನೆ ಬಿಟ್ಟು ದೂರವಾಗಿದ್ದ ಇವರ ತಂದೆಗೆ ಇತ್ತೀಚೆಗೆ ಆರೋಗ್ಯದ ಸಮಸ್ಯೆ ಎದುರಾದಾಗ ಇವರೇ ಸಹಾಯ ಮಾಡಿದ್ದರು. ಹೆಣ್ಣಾಗಿ ಹುಟ್ಟಿ, ಸವಾಲುಗಳನ್ನು ಎದುರಿಸಿ ಇಂದು ಸಾಧಕಿಯಾಗಿರುವ ಅನುಪಮಾ ಗೌಡ ಜೀವನ ಪ್ರತಿ ಯುವತಿ ಯುವಕರಿಗೂ ಸ್ಪೂರ್ತಿದಾಯಕವಾಗಿದೆ.