ಮನೆ ರಾಜ್ಯ ಮುಂಬರುವ ಸರಕಾರದಲ್ಲಿ ರೆಡ್ಡಿ ಜನಾಂಗದ ಶಾಸಕರುಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ: ಕರ್ನಾಟಕ ರೆಡ್ಡಿ ಜನಸಂಘ

ಮುಂಬರುವ ಸರಕಾರದಲ್ಲಿ ರೆಡ್ಡಿ ಜನಾಂಗದ ಶಾಸಕರುಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ: ಕರ್ನಾಟಕ ರೆಡ್ಡಿ ಜನಸಂಘ

0

ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ರೆಡ್ಡಿ ಜನಾಂಗದ 12 ಜನ ಶಾಸಕರು ಆಯ್ಕೆಯಾಗಿದ್ದು, ಮುಂದಿನ ಸರಕಾರದಲ್ಲಿ ರೆಡ್ಡಿ ಜನಾಂಗದ ಶಾಸಕರುಗಳೀಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಕರ್ನಾಟಕ ರೆಡ್ಡಿ ಜನಸಂಘ ಮನವಿ ಮಾಡಿದೆ.

Join Our Whatsapp Group

ಈ ಬಗ್ಗೆ ಕಾಂಗ್ರೆಸ್‌ ನಾಯಕರುಗಳಿಗೆ ಪತ್ರವನ್ನು ಬರೆದಿರುವ ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷರಾದ ಜಯರಾಂ ರೆಡ್ಡಿ ಎಸ್‌, ರೆಡ್ಡಿ ಜನಾಂಗ ರಾಜ್ಯದ ಪ್ರಮುಖ ಜನಾಂಗಗಳಲ್ಲಿ ಒಂದು. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದ 12 ಅಭ್ಯರ್ಥಿಗಳು ಶಾಸಕರಾರಿ ಆಯ್ಕೆಯಾಗಿದ್ದಾರೆ. ರಾಮಲಿಂಗಾರೆಡ್ಡಿ, ಹೆಚ್‌.ಕೆ ಪಾಟೀಲ್‌, ಎನ್‌.ಎಸ್‌ ಸುಬ್ಬಾರೆಡ್ಡಿ ಅವರಂತಹ ಹಿರಿಯ ನಾಯಕರು ಸೇರಿದಂತೆ 12 ಜನರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವ ರೆಡ್ಡಿ ಜನಾಂಗದ ಶಾಸಕರುಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಮೂಲಕ ಅವರು ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ್ದಾರೆ.