ಮನೆ ಕ್ರೀಡೆ ರಣಜಿ ಕ್ರಿಕೆಟ್: ಕರ್ನಾಟಕ -ಗೋವಾ ಪಂದ್ಯ ಡ್ರಾ

ರಣಜಿ ಕ್ರಿಕೆಟ್: ಕರ್ನಾಟಕ -ಗೋವಾ ಪಂದ್ಯ ಡ್ರಾ

0

ಪೊರ್ವರಿಮ್‌: ಕರ್ನಾಟಕ -ಗೋವಾ ನಡುವಿನ ರಣಜಿ ಪಂದ್ಯ ಡ್ರಾಗೊಂಡಿದೆ. ಮೊದಲ ಇನಿಂಗ್ಸ್‌ನಲ್ಲಿ 373 ರನ್‌ಗಳಿಗೆ ಆಲೌಟಾದ ಗೋವಾ ಮೇಲೆ ಕರ್ನಾಟಕ ಫಾಲೋಆನ್‌ ಹೇರಿತು. ಆದರೆ 2ನೇ ಇನಿಂಗ್ಸ್‌ನಲ್ಲಿ ಗೋವಾ ಎಚ್ಚರಿಕೆಯಿಂದ ಆಡಿತು. ಕರ್ನಾಟಕ 3 ಅಂಕ ಪಡೆದರೆ, ಗೋವಾಕ್ಕೆ ಒಂದು ಅಂಕ ಲಭಿಸಿತು.

ಕರ್ನಾಟಕ ತನ್ನ ಮೊದಲ ಸರದಿ ಯಲ್ಲಿ 7 ವಿಕೆಟಿಗೆ 603 ರನ್‌ ಗಳಿಸಿ ದರೆ, ಗೋವಾ 373ಕ್ಕೆ ಆಲೌಟಾಗಿ ಫಾಲೋಆನ್‌ಗೆ ತುತ್ತಾಯಿತು. 2ನೇ ಇನಿಂಗ್ಸ್‌ ಆರಂಭಿಸಿದ ಗೋವಾ 3 ವಿಕೆಟ್‌ ನಷ್ಟಕ್ಕೆ 150 ರನ್‌ ಗಳಿಸಿದ್ದಾಗ ಪಂದ್ಯ ಮುಗಿಯಿತು. ಮತ್ತೆ ಮಿಂಚಿದ ಸುಯಶ್‌ ಪ್ರಭುದೇಸಾಯಿ 95 ಎಸೆತಗಳಲ್ಲಿ 61 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌

ಮೊದಲ ಇನಿಂಗ್ಸ್‌

ಕರ್ನಾಟಕ: 7 ವಿಕೆಟ್‌ ಗಳಿಗೆ 603 ಡಿಕ್ಲೇರ್ಡ್‌.

 ಗೋವಾ: 121.5 ಓವರ್‌’ಗಳಲ್ಲಿ 373.

ಎರಡನೇ ಇನಿಂಗ್ಸ್‌

ಗೋವಾ: 45 ಓವರ್‌ ಗಳಲ್ಲಿ 3 ವಿಕೆಟ್‌’ಗಳಿಗೆ 150 (ಅಮೋಘ್‌ ದೇಸಾಯಿ 25, ಸುಮೀರನ್ ಆಮೋಣಕರ್ 26, ಸುಯಶ್ ಔಟಾಗದೆ 61, ಸ್ನೇಹಲ್‌ ಕೌತಣಕರ 21, ದರ್ಶನ್‌ ಮಿಸಾಳ್‌ ಔಟಾಗದೆ 10, ವಿಜಯಕುಮಾರ್ ವೈಶಾಖ್‌ 12ಕ್ಕೆ 1, ಕೆ.ಗೌತಮ್‌ 35ಕ್ಕೆ 1)

ಫಲಿತಾಂಶ: ಪಂದ್ಯ ಡ್ರಾ, ಕರ್ನಾಟಕಕ್ಕೆ 3, ಗೋವಾಕ್ಕೆ 1 ಪಾಯಿಂಟ್‌

ಹಿಂದಿನ ಲೇಖನಬಿಜೆಪಿ ಏಕಾಂಗಿಯಾಗಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರಲಿದೆ: ಅಮಿತ್ ಶಾ
ಮುಂದಿನ ಲೇಖನ53 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಹಲವರಿಗೆ ಮುಂಬಡ್ತಿ