ಮನೆ ಯೋಗಾಸನ ತಾಡಾಸನ

ತಾಡಾಸನ

0

ಸೂರ್ಯ ನಮಸ್ಕಾರದಲ್ಲಿ ಅನೇಕ ಆಸನಗಳ ಭಂಗಿಯಿದ್ದು, ಆಸನಗಳಂತೆಯೇ ಸೂರ್ಯನಮಸ್ಕಾರದಿಂದಲೂ ಅನೇಕ ಲಾಭಗಳನ್ನು ಪಡೆಯಬಹುದು. ಸೂರ್ಯನಮಸ್ಕಾರವು ಕೇವಲ ಧಾರ್ಮಿಕ ಕ್ರಿಯೆಯಾಗಿದರೆ ಶಾರೀರಿಕವಾಗಿಯೂ ಲಾಭಪ್ರದ ಎನ್ನುವುದನ್ನು ಮನಗಾಣಬೇಕು.

Join Our Whatsapp Group

ಮಾಡುವ ಕ್ರಮ:

1)   ಪ್ರಾರಂಭದಲ್ಲಿ ಭೂಮಿಗೆ ಲಂಬವಾಗಿ, ಎರಡೂ  ಪಾದಗಳು ಮತ್ತು ಹಿಮ್ಮಡಿಗಳು ಒಂದಕ್ಕೊಂದು ಸ್ಪರ್ಶಿಸಿರುವಂತೆ ಜೋಡಿಸಿ, ಎದೆ ಎತ್ತಿ ನೇರವಾಗಿ ನಿಲ್ಲಬೇಕು.

2)  ಅನಂತರ ಎರಡೂ ಕೈಗಳನ್ನು (ಚಿತ್ರದಲ್ಲಿರುವಂತೆ) ನಮಸ್ಕಾರ ಮುದ್ರೆಯಂತೆ ಜೋಡಿಸಬೇಕು. (ಸಾಮಾನ್ಯವಾಗಿ ತಾಡಾಸನದಲ್ಲಿ ಎರಡೂ ಕೈಗಳು ಶರೀರದ ಪಕ್ಕದಲ್ಲಿ ನೀಳವಾಗಿ ಚಾಚಿರುತ್ತವೆ.)

ಈ ಸ್ಥಿತಿಯಲ್ಲಿ ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡಿರಬೇಕು, ಮಂಡಿ ಚಿಪ್ಪುಗಳನ್ನು ಮೇಲಕ್ಕೆ ಎಳೆದುಕೊಂಡಿರಬೇಕು, ಶರೀರದಲ್ಲಿ ಎಲ್ಲೂ ಸಡಿಲತೆ ಇರಬಾರದು ಮತ್ತು ನಿಧಾನವಾಗಿ ನೀಳವಾದ ಉಸಿರಾಟ ಆಡುತ್ತಿರಬೇಕು. ಎರಡೂ ಕಾಲುಗಳ ಮೇಲೆ ಸಮನವಾಗಿ ಶರೀರದ ಭಾರ ಹೊರಿಸಿರಬೇಕು.

ಲಾಭಗಳು: ತಾಡಾಸನದ ಅಭ್ಯಾಸದಿಂದ ದೇಹವು ಹಗುರವಾಗುವುದು, ಮನಸ್ಸಿಗೆ ಲವಲವಿಕೆ ಬರುವುದು. ಶ್ವಾಸನಾಳವು ಶುದ್ಧವಾಗಿ ಪ್ರಾಣವಾಯುವು ಶರೀರದೊಳಗೆ ಸುಲಭವಾಗಿ ಸಂಚರಿಸುವುದು. ಕೆಮ್ಮು, ಶ್ವಾಸಕೋಶದ ತೊಂದರೆಗಳು ಮತ್ತು ಹೃದಯದ ಬಲಹೀನತೆಯು ಸೂರ್ಯನಮಸ್ಕಾರದ ಅಭ್ಯಾಸದಿಂದ ನಿವಾರಣೆಯಾಗುವುದು. ಕಾಲುಗಳಲ್ಲಿನ ವಕ್ರತೆಯೂ ದೂರವಾಗುವುದು. ಬೆನ್ನು ನೋವು ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವುದು. ಎದೆಯು ಸಾಕಷ್ಟು ವಿಶಾಲವಾಗಲೂ ತಾಡಾಸನ (ಸೂರ್ಯನಮಸ್ಕಾರದ ಈ ಸ್ಥಿತಿಯ)ಸಹಾಯಕಾರಿ.