ಹೈದರಾಬಾದ್: ಗುರುವಾರ ನಡೆದ ಪಂದ್ಯದಲ್ಲಿ ಪ್ಲೇ ಆಫ್ ಸ್ಥಾನಕ್ಕೇರಲು ತೀವ್ರ ಹೋರಾಟ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಆಘಾತದ ಅನುಭವಿಸಿತು. ತಂಡದ ಮೊತ್ತ 25 ಆಗುತ್ತಿದಂತೆ ಅಭಿಷೇಕ್ ಶರ್ಮ ರಾಹುಲ್ ತ್ರಿಪಾಠಿ ಔಟಾದರು.
ನಂತರ ಕಣಕ್ಕೆ ಬಂದ ಹೆನ್ರಿಕ್ ಕ್ಲಾಸೆನ್ ತಂಡಕ್ಕೆ ಆಸರೆ ಆದರು. 51 ಎಸೆತಗಳಲ್ಲಿ 8 ಫೋರ್ ಮತ್ತು 6 ಸಿಕ್ಸರ್ ಗಳ ಬಲದಿಂದ 104 ರನ್ ಸಿಡಿಸಿ ಚೊಚ್ಚಲ ಐಪಿಎಲ್ ಶತಕ ದಾಖಲಿಸಿ, ಸಂಭ್ರಮಿಸಿದರು.
ಇನಿಂಗ್ಸ್ ಅಂತ್ಯದಲ್ಲಿ ಹ್ಯಾರಿ ಬ್ರೂಕ್ (27) ಬಿರುಸಿನ ಬ್ಯಾಟಿಂಗ್ ನಡೆಸಿದರು. ಸನ್ ರೈಸರ್ಸ್ 20 ಓವರ್ ಗಳಲ್ಲಿ 186/5 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.
ಗೆಲುವಿಗೆ 187 ರನ್ ಗಳ ಗುರಿ ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್ ಗೆ ಜೊತೆಯಾಟ ಕಟ್ಟಿದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್, 17.5 ಓವರ್ ಗಳಲ್ಲಿ 172 ರನ್ ಗಳ ಜೋತೆ ಆಟ ನಿಭಾಯಿಸಿದರು. ಇದು ಐಪಿಎಲ್ 2023 ಟೂರ್ನಿಯಲ್ಲಿ ಯಾವುದೇ ವಿಕೆಟ್ ಗೆ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.
ಸಿಕ್ಕ ಅದ್ಭುತ ಜೋತೆ ಆಟಕಕ್ಕೆ ಆರ್ಸಿಬಿ 19.2 ಓವರ್ ಗಳಲ್ಲೇ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿತು. ಇದು 2015ರ ಬಳಿಕ ಹೈದರಾಬಾದ್ ಅಂಗಣದಲ್ಲಿ ಸನ್ ರೈಸರ್ಸ್ ಎದುರು ರಾಯಲ್ ಚಾಲೆಂಜಸರ್ಸ್ ಗೆ ಸಿಕ್ಕಂತಹ ಮೊದಲ ಗೆಲುವಾಗಿದೆ.