ಮನೆ ತಂತ್ರಜ್ಞಾನ ಇದು ಮಾಮೂಲಿ ಕ್ಯಾಮೆರಾ ಅಲ್ಲ, ಸ್ಪೆಷಲ್ ಕ್ಯಾಮೆರಾ: ಯಾಕೆ ಅಂತೀರಾ ? ಈ  ಸುದ್ದಿ ಓದಿ

ಇದು ಮಾಮೂಲಿ ಕ್ಯಾಮೆರಾ ಅಲ್ಲ, ಸ್ಪೆಷಲ್ ಕ್ಯಾಮೆರಾ: ಯಾಕೆ ಅಂತೀರಾ ? ಈ  ಸುದ್ದಿ ಓದಿ

0

ನೀವು ಯಾರಿಗಾದರೂ ಉಡುಗೊರೆಯನ್ನು ನೀಡಿದಾಗ, ತಕ್ಷಣ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಿ ಮತ್ತು ಅವರ ಮುಂದೆ ಫೋಟೋದ ಪ್ರತಿಯನ್ನುಕೊಡಿ ಇದು ತುಂಬಾ ಮೆಮೊರೆಬಲ್ ಆಗಿರುತ್ತದೆ.

Join Our Whatsapp Group

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಟೂರ್ ​ಗೆ ಹೋಗುತ್ತಾರೆ. ಎಲ್ಲರ ಬಳಿಯೂ ಮೊಬೈಲ್​ ಮತ್ತು ಕ್ಯಾಮರಾ ಇದ್ಧೇ ಇರುತ್ತದೆ. ಆದರೆ ಮೆಮೊರಿ ಪ್ರಾಬ್ಲ್ಂ ಇದ್ದೇ ಇರುತ್ತದೆ. ಅದಕ್ಕೆಂದೇ ಈ ಕ್ಯಾಮರಾ ತಯಾರು ಮಾಡಲಾಗಿದೆ.

ಇದು ಜಪಾನ್‌ ನ ಫ್ಯೂಜಿಫಿಲ್ಮ್ ಕಂಪನಿಯಿಂದ ತಯಾರಿಸಲ್ಪಟ್ಟ Instax Mini 12 Blue EX D ಕ್ಯಾಮೆರಾ. ಕ್ಲಿಕ್ ಮಾಡಿದ ತಕ್ಷಣ ಫೋಟೋ ಬರುವುದು ಇದರ ವಿಶೇಷತೆ.

ಇದು 5 ಬಣ್ಣಗಳಲ್ಲಿ ಲಭ್ಯವಿದೆ. ಇದರ ಗಾತ್ರ 10.4 ಸೆಂ.ಮೀ ಉದ್ದ, 12.2 ಸೆಂ.ಮೀ ಅಗಲ ಮತ್ತು 6.6 ಸೆಂ.ಮೀ ಎತ್ತರವಿದೆ. ತೂಕ 306 ಗ್ರಾಂ ಇದೆ.

ಇದು ಈಗಾಗಲೇ 2  ಬ್ಯಾಟರಿಗಳನ್ನು ಒಳಗೊಂಡಿದೆ.  ಈ ಬ್ಯಾಟರಿಯೂ ಖಾಲಿ ಆದರೆ ಇನ್ನೊಂದು ಬ್ಯಾಟರಿ ಹಾಕುವ ವ್ಯವಸ್ಥೆ ಕೂಡಾ ಇದೆ.

ಡಿಜಿಟಲ್ ಕ್ಯಾಮೆರಾಗಳಿದ್ದರೂ ಅದರಲ್ಲಿ ತೆಗೆದ ಫೋಟೋಗಳನ್ನು ಡಿಜಿಟಲ್ ರೂಪದಲ್ಲಿ ಮಾತ್ರ ನಾವು ನೋಡಬಹುದು. ಆದ್ದರಿಂದ ಹಾರ್ಡ್​ ಕಾಪಿ ಪಡೆಯಲು ಈ ಕ್ಯಾಮರಾ ಬೆಸ್ಟ್​.

ನೀವು ಈ ಕ್ಯಾಮರಾವನ್ನು ಉಪಯೋಗಿಸುತ್ತಿದ್ದರೆ ಝೆರಾಕ್ಸ್​ ಮಾಡುವ ಸಲುವಾಗಿ ನೀವು ಸ್ಟುಡಿಯೋಗೆ ಹೋಗುವ ಅಗತ್ಯವಿಲ್ಲ. ನೀವು ಫೋಟೋ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಫೋಟೋ ಇದರಲ್ಲಿ ಬರುತ್ತದೆ.

ಈ ಫೋಟೋದ  ಕಾಫಿ ನೋಡಿದಾಗ, ಫೋಟೋ ಸರಿಯಾಗಿ ತೆಗೆದಿದೆಯೋ ಇಲ್ಲವೋ ಎಂದು ತಕ್ಷಣವೇ ತಿಳಿಯುತ್ತದೆ. ಇದರ ಬೆಲೆ ಕೇವಲ 4 ಸಾವಿರ.

ನೀವು ಯಾರಿಗಾದರೂ ಉಡುಗೊರೆಯನ್ನು ನೀಡಿದಾಗ, ತಕ್ಷಣ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಿ ಮತ್ತು ಅವರ ಮುಂದೆ ಫೋಟೋದ ಪ್ರತಿಯನ್ನುಕೊಡಿ ಇದು ತುಂಬಾ ಮೆಮೊರೆಬಲ್ ಆಗಿರುತ್ತದೆ.

ಈ ಕ್ಯಾಮರಾದಲ್ಲಿ ತೆಗೆದ ಮೊದಲ ಫೋಟೋ  ನಿಮ್ಮ ಜೀವನವಿಡಿ ಖುಷಿಯನ್ನು ತರುತ್ತದೆ. ಹುಡುಗಿಯರಿಗಂತು ಈ ಕ್ಯಾಮರಾ ತುಂಬಾ ಇಷ್ಟವಾಗಲಿದೆ.

ಹಿಂದಿನ ಲೇಖನಆರ್’ಸಿಬಿ ಎದುರು ಮಂಡಿ ಊರಿದ  ಸನ್ ರೈಸರ್ಸ್ ಹೈದರಾಬಾದ್
ಮುಂದಿನ ಲೇಖನಮಾರೀಹಾಳ: ವೈಯಕ್ತಿಕ ದ್ವೇಷ ಹಿನ್ನೆಲೆ: ಯುವಕನ ಬರ್ಬರ ಹತ್ಯೆ