ಮನೆ ಮನರಂಜನೆ ಗ್ಯಾಂಗ್​ ಸ್ಟರ್​ ತಂದೆ-ಮಗನ ಪಾತ್ರದಲ್ಲಿ ಸಂಜಯ್​ ದತ್​-ವಿಜಯ್

ಗ್ಯಾಂಗ್​ ಸ್ಟರ್​ ತಂದೆ-ಮಗನ ಪಾತ್ರದಲ್ಲಿ ಸಂಜಯ್​ ದತ್​-ವಿಜಯ್

0

ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾದ ‘ಲಿಯೋ’ ಸಿನಿಮಾದಲ್ಲಿ ದಳಪತಿ ವಿಜಯ್​ ನಾಯಕನಾಗಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್​ನ ಸ್ಟಾರ್​ ಕಲಾವಿದ ಸಂಜಯ್​ ದತ್​ ಕೂಡ ಇದರಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.

Join Our Whatsapp Group

ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಸಂಜಯ್​ ದತ್​ ಮತ್ತು ದಳಪತಿ ವಿಜಯ್​ ಅವರು ತಂದೆ-ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರದ್ದೂ ಗ್ಯಾಂಗ್ ​ಸ್ಟರ್​ ಪಾತ್ರ ಎನ್ನಲಾಗಿದೆ.

ಈ ಸಿನಿಮಾಗಾಗಿ ಸಂಜಯ್​ ದತ್​ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ಲಿಯೋ’ ಸಿನಿಮಾಗೆ ಲೋಕೇಶ್​ ಕನಗರಾಜ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹಲವು ಕಾರಣಗಳಿಂದ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

‘ಕೆಜಿಎಫ್​: ಚಾಪ್ಟರ್​ 2’ ಬಳಿಕ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಂಜಯ್​ ದತ್​ ಅವರಿಗೆ ಬೇಡಿಕೆ ಹೆಚ್ಚಾಗಿದೆ. ‘ಲಿಯೋ’ ಸಿನಿಮಾದಲ್ಲಿ ಅವರಿಗೆ ಕೈ ತುಂಬ ಸಂಭಾವನೆ ನೀಡಲಾಗುತ್ತಿದೆ. ಅವರ ಗೆಟಪ್​ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಈ ಮೊದಲು ರಿಲೀಸ್​ ಆದ ಟೈಟಲ್​ ಟೀಸರ್ ​ನಲ್ಲಿ ದಳಪತಿ ವಿಜಯ್​ ಅವರು ಚಾಕೊಲೇಟ್​ ಮಾಡುತ್ತಿರುವ ದೃಶ್ಯ ಹೈಲೈಟ್​ ಆಗಿತ್ತು. ಅದೇ ರೀತಿ ಅವರು ಆಯುಧ ತಯಾರಿಸುವುದನ್ನೂ ತೋರಿಸಲಾಗಿತ್ತು. ಇದರಿಂದ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿದೆ.