ಮನೆ ಯೋಗಾಸನ ಉತ್ಥಿತ ಪಾದಾಸನ

ಉತ್ಥಿತ ಪಾದಾಸನ

0

ಉತ್ಥಿತ ಪಾದಾಸನದಲ್ಲಿ, ಉತ್ಥಿತ ಏಕಪಾದಾಸನ ಮತ್ತು  ಉತ್ಥಿತ ದ್ವಿಪಾದಾಸನ ಎಂಬ ಪ್ರಭೇದಗಳು ಇವೆ.

Join Our Whatsapp Group

ಮಾಡುವ ಕ್ರಮ

1)    ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಅಂಗಾತನಾಗಿ, ನೇರವಾಗಿ ಮಲಗಬೇಕು.

2)   ಅನಂತರ ನಿಧನವಾಗಿ ಯಾವುದಾದರೂ ಒಂದು ಕಾಲನ್ನು ( ಉ. ಚಿತ್ರದಲ್ಲಿ ತೋರಿಸಿರುವಂತೆ ಬಲಗಾಲನ್ನು)  ಸಾಧ್ಯವಾದಷ್ಟೂ ಮೇಲಕ್ಕೆ ಎತ್ತಬೇಕು. ಹೀಗೆ ಕಾಲನ್ನು ಮೇಲಕ್ಕೆ ಎತ್ತುವಾಗ ನಿಧನವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಬಹುದು.

3)    ಉಸಿರನ್ನು ಹೊರಕ್ಕೆ ಬಿಡುತ್ತಾ ನಿಧಾನವಾಗಿ ಕಾಲನ್ನೂ ಕೆಳಗೆ ಇಳಿಸುವುದು.

4)  ಇದೇ ಕ್ರಿಯೆಯನ್ನು ಇನ್ನೊಂದು ಕಾಲಿನಿಂದಲೂ (ಎಡಗಾಲಿನಿಂದಲೂ) ಮಾಡುವುದು. ಬಲಗಾಲು ಮತ್ತು ಎಡಗಾಲಿನಿಂದ ಮೂರು ಬಾರಿ ಪ್ರತ್ಯೇಕವಾಗಿ ಈ ಕ್ರಿಯೆಯನ್ನು ಮಾಡಿದ ಮೇಲೆ, ನಿಧಾನವಾಗಿ ಎರಡೂ ಕಾಲುಗಳಿಂದ  ಏಕಕಾಲದಲ್ಲಿ ಮಾಡುವುದು. ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಿರುವಾಗ ಸೊಂಟ, ಬೆನ್ನು ಮತ್ತು ತಲೆ ಎಲ್ಲವೂ ಭೂಮಿಗೆ ಸಮಾನಾಂತರವಾಗಿದ್ದು ಕಾಲುಗಳು ಮಾತ್ರ ಭೂಮಿಗೆ ಲಂಬವಾಗಿರುತ್ತದೆ.

ಲಾಭಗಳು : ಉತ್ಥಿತ ಪಾದಾಸನ ಅಭ್ಯಾಸದಿಂದ ಉದರದ ಸ್ನಾಯುಗಳು ಬಲಗೊಳ್ಳುವವು, ಮಲಬದ್ಧತೆಯು ನಾಶವಾಗುವುದು, ಹೊಟ್ಟೆಯ ಬೊಜ್ಜು ಕರಗುವುದು ಮತ್ತು ಉದರ ಸಂಬಂಧಿ ಅನೇಕ ತೊಂದರೆಗಳು ನಿವಾರಣೆಯಾಗುವುವು.