ಮನೆ ಸುದ್ದಿ ಜಾಲ ಮೋದಿ ಫೋಟೋ ಇಟ್ಟುಕೊಂಡ ಮುಸ್ಲಿಂ ವ್ಯಕ್ತಿಗೆ ಮನೆ ಖಾಲಿ ಮಾಡುವಂತೆ ಮಾಲೀಕನಿಂದ ಬೆದರಿಕೆ

ಮೋದಿ ಫೋಟೋ ಇಟ್ಟುಕೊಂಡ ಮುಸ್ಲಿಂ ವ್ಯಕ್ತಿಗೆ ಮನೆ ಖಾಲಿ ಮಾಡುವಂತೆ ಮಾಲೀಕನಿಂದ ಬೆದರಿಕೆ

0

ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಇಟ್ಟುಕೊಂಡಿರುವುದಕ್ಕೆ  ವ್ಯಕ್ತಿಯೊಬ್ಬರನ್ನು ಮನೆಯ ಮಾಲೀಕ ಮನೆ ಖಾಲಿ ಮಾಡುವಂತೆ ಬೆದರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಇಂದೋರ್‌ನ ನಿವಾಸಿಯೊಬ್ಬರು ಮಂಗಳವಾರ ‘ಜಾನ್‌ಸುನ್‌ವೈ’  ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಹೊಂದಿದ್ದಕ್ಕಾಗಿ ಮನೆಯನ್ನು ಖಾಲಿ ಮಾಡುವಂತೆ ತನ್ನ ಮನೆಯ ಮಾಲೀಕ ಬೆದರಿಸಿದ್ದಾಗಿ ದೂರು ನೀಡಿದ್ದಾರೆ.

ಯೂಸುಫ್ ಖಾನ್ ಅವರು ತಮ್ಮ ಮನೆ ಮಾಲೀಕರಾದ ಯಾಕೂಬ್ ಮನ್ಸೂರಿ, ಸುಲ್ತಾನ್ ಮನ್ಸೂರಿ, ಷರೀಫ್ ಮನ್ಸೂರಿ ಅವರಿಂದ ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

ನಾನು ಪ್ರಧಾನಿಯನ್ನು ತುಂಬಾ ಗೌರವಿಸುತ್ತೇನೆ. ಅವರ ಭಾಷಣಗಳನ್ನು ಅನುಸರಿಸುತ್ತೇನೆ. ಅವರ ಚಿತ್ರ ನನ್ನ ಮನೆಯಲ್ಲಿದೆ. ಆದರೆ ಜಮೀನುದಾರರು ಅದನ್ನು ತೆಗೆದುಹಾಕುವಂತೆ ನನ್ನನ್ನು ಕೇಳಿದರು. ಅವರು ನನ್ನನ್ನು ಹೊಡೆದು ಮನೆಯನ್ನು ಖಾಲಿ ಮಾಡುವಂತೆ ಒತ್ತಾಯಿಸುತ್ತಾರೆ ಎಂದು ಯೂಸುಫ್ ಖಾನ್ ಹೇಳಿದರು.

ದೂರನ್ನು ಉಲ್ಲೇಖಿಸಿದ ಹೆಚ್ಚುವರಿ ಡಿಸಿಪಿ ಮನಿಶಾ ಪಾಠಕ್ ಸೋನಿ, ಪ್ರತಿಯೊಬ್ಬ ನಾಗರಿಕರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ ಮತ್ತು ಯೂಸುಫ್ ಖಾನ್ ಅವರ ಆಯ್ಕೆಯ ಚಿತ್ರಗಳನ್ನು ಮನೆಯಲ್ಲಿ ಇಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.