ಮನೆ ರಾಜಕೀಯ ಕಣ್ವ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಎಚ್.ಡಿ ಕುಮಾರಸ್ವಾಮಿ ದಂಪತಿ

ಕಣ್ವ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಎಚ್.ಡಿ ಕುಮಾರಸ್ವಾಮಿ ದಂಪತಿ

0

ಚನ್ನಪಟ್ಟಣ(Channapatna): ತಾಲ್ಲೂಕಿನ ಅಬ್ಬೂರು ಗ್ರಾಮದ ಸಮೀಪದಲ್ಲಿರುವ ಕಣ್ವ ಜಲಾಶಯವು ಸತತವಾಗಿ 20 ವರ್ಷಗಳ ಬಳಿಕ ಭರ್ತಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ದಂಪತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು.

ರಾಮನಗರ ಶಾಸಕಿಯೂ ಆಗಿರುವ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಮಾಗಡಿ ಶಾಸಕ ಮಂಜುನಾಥ್ ಸೇರಿ ಹಲವು ಮುಖಂಡರು ಈ ಸಂದಭರ್ದಲ್ಲಿ ಭಾಗಿಯಾಗಿದ್ದರು.

ಕಣ್ವ ಜಲಾಶಯವು 1946 ರಲ್ಲಿ ನಿರ್ಮಾಣವಾಗಿದ್ದು, 5 ಸ್ವಯಂಚಾಲಿತ ನೀರುಬಾಗಿಲುಗಳನ್ನು ಹೊಂದಿದೆ. ಈ ಕಣ್ವ ಜಲಾಶಯ ತನ್ನ ವಿಶಾಲವಾದ ಅಣೆಕಟ್ಟಿನಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಲಿದೆ.ಈ ಕಣ್ವ ನದಿಯು ಮಾಗಡಿ-ರಾಮನಗರ-ಚನ್ನಪಟ್ಟಣ-ಮಳವಳ್ಳಿ ತಾಲ್ಲೂಕುಗಳಲ್ಲಿ ಹರಿದು ಮುಂದೆ ಕಾವೇರಿ ನದಿಯ ಉಪನದಿಯಾದ ಶಿಂಷಾ ನದಿಯಲ್ಲಿ ಸಂಗಮವಾಗುತ್ತದೆ.ಹಾಗೆಯೇ ಕೆಂಗಲ್ ನಿಂದ ಕಣ್ವಗೆ ತೆರಳುವ ಮಾರ್ಗ ಮಧ್ಯೆ ಅಚ್ಚ ಹಸಿರಿನಿಂದ ಕೂಡಿದ ರಸ್ತೆಯ ಸುತ್ತಮುತ್ತಲಿನ ಪರಿಸರ ಪ್ರವಾಸಿಗರನ್ನು ಕಣ್ಮನ ಸೆಳೆಯತ್ತದೆ.

ಹಿಂದಿನ ಲೇಖನಸೆ.14 ರಂದು ದಸಂಸದಿಂದ ಹೊಸ ರಾಜಕೀಯ ಪಕ್ಷದ ಘೋಷಣೆ ಸಮಾರಂಭ
ಮುಂದಿನ ಲೇಖನತೂಕ ಇಳಿಕೆಗೆ ಯಾವ ಆಹಾರ ಸೇವನೆ ಉಪಯುಕ್ತ?