ಗರ್ಭಾಸನಕ್ಕೆ ಅನೇಕಾರು ಹೆಸರುಗಳುಂಟು. ಸಾಮಾನ್ಯವಾಗಿ ಇದನ್ನು ಗರ್ಭಾಸನವೆಂದೂ ಕರೆಯುತ್ತಾರೆ. ಇದು ಸಹ ಪದ್ಮಾಸನದ ಒಂದು ವ್ಯತ್ಯಾಸ್ತಭಂಗಿಯೇ. ಗರ್ಭದಲ್ಲಿರುವ ಮಗುವಿನ ಆಕಾರವನ್ನು ಹೋಲುವುದೆಂದರೂ, ಈ ವಿವರಣೆಯು ಹೆಚ್ಚು ಅರ್ಥಕಾರಿಯಲ್ಲ. ಏಕೆಂದರೆ ಗರ್ಭದಲ್ಲಿರುವ ಮಗು ಪದ್ಮಾಸನದಲ್ಲಿ ಇರುವುದಿಲ್ಲ. ಅಲ್ಲದೆ ಗರ್ಭದಲ್ಲಿ ಮಗು ಚಿತ್ರದಲ್ಲಿರುವಂತೆ ಇರದೆ ತಲೆಕೆಳಗಾಗಿರುತ್ತದೆ.
ಮಾಡುವ ಕ್ರಮ : ಗರ್ಭಾಸನ ಮಾಡುವ ಮೊದಲು ಪದ್ಮಾಸನದಲ್ಲಿ ಎಡತೊಡೆಯ ಮೇಲೆ ಬಲಪಾದವನ್ನೂ ಬಲತೊಡೆಯ ಮೇಲೆ ಎಡಪಾದವನ್ನೂ ಹಾಕಿ ಕುಳಿತುಕೊಳ್ಳಬೇಕು. ಕುಕ್ಕುಟಾಸನದಲ್ಲಿ ಹೇಳಿದಂತೆ ಬಲಗಾಲು ಮತ್ತು ಬಲ ಮೀನಖಂಡಗಳ ನಡುವೆ ಬಲಗೈಯನ್ನೂ, ಎಡಗಾಲು ಮತ್ತು ಎಡ ಮೀನಖಂಡಗಳ ನಡುವೆ ಎಡಗೈಯನ್ನೂ ತೂರಿಸಬೇಕು. ಅನಂತರ ಪೃಷ್ಠಭಾಗದ ತಳದ ಕಾಕ್ಸಿಕ್ಸ್ (ಕೊನೆಯ ಮೂಳೆಯ) ಮೇಲೆ ಮೊದಲು ಕುಳಿತುಕೊಳ್ಳಬೇಕು. ಈ ಸ್ಥಿತಿಯಲ್ಲಿ ಸಮತೋಲನ ಬಂದನಂತರವೇ ಬಲಕೈಯಿಂದ ಬಲಕಿವಿಯನ್ನು ಎಡಗೈಯಿಂದ ಎಡಕಿವಿಯನ್ನು ಹಿಡಿದು ಚಿತ್ರದಲ್ಲಿ ತೋರಿಸಿರುವಂತೆ ಕುಳಿತುಕೊಳ್ಳಬೇಕು. ಈ ಸ್ಥಿತಿಯಲ್ಲಿ ಸುಮಾರು 20 ರಿಂದ 30 ಸೆಕೆಂಡುಗಳವರೆಗಿದ್ದು ಅನಂತರ ನಿಧನವಾಗಿ ಪದ್ಮಾಸನದಲ್ಲಿ ಕುಳಿತು ಕ್ರಮೇಣ ಕಾಲುಗಳನ್ನು ಬದಲಾಯಿಸಬೇಕು. ಈ ಸ್ಥಿತಿಯಲ್ಲಿ ಸಮತೋಲನ ಪಡೆಯುವುದು ಅತಿ ಮುಖ್ಯವಾದುದು. ಒಮ್ಮೆ ಸಮತೋಲನ ತಪ್ಪಿತೆಂದರೆ ಬೀಳುತ್ತಾರೆ.
ಲಾಭಗಳು : ಈ ಆಸನದ ಅಭ್ಯಾಸದಿಂದ ದೇಹದ ಪ್ರತಿಯೊಂದು ಅಂಗವೂ ಕುಗ್ಗಿ, ಶರೀರದಲ್ಲಿ ಲವಲವಿಕೆ ಉಂಟಾಗುವುದು. ರಕ್ತ ಸಂಚಾರ ಸುಸೂತ್ರವಾಗಿ ಹಾಗೂ ವೇಗವಾಗಿ ನಡೆಯುವುದು. ಗರ್ಭಾಸನವು ಕೆಲ ಮಟ್ಟಿಗೆ ಹರ್ನಿಯಾ ರೋಗವನ್ನು ತಡೆಗಟ್ಟುವುದು. ಸತತ ಅಭ್ಯಾಸದಿಂದ ಎದೆ ಹಾಗೂ ಸೊಂಟಗಳಲ್ಲಿ ನವಚೈತನ್ಯ ಮೂಡುವುದು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.