ಮನೆ ತಂತ್ರಜ್ಞಾನ ಯೂಟ್ಯೂಬ್​’ನ ಈ ಫೀಚರ್​​ನ್ನು ಬಂದ್​ ಮಾಡಲು ಮುಂದಾದ ಕಂಪನಿ

ಯೂಟ್ಯೂಬ್​’ನ ಈ ಫೀಚರ್​​ನ್ನು ಬಂದ್​ ಮಾಡಲು ಮುಂದಾದ ಕಂಪನಿ

0

ದೆಹಲಿ: ವಿಶ್ವದಾದ್ಯಂತ ಮಿಲಿಯನ್ ​ಗಟ್ಟಲೇ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಆನ್ ಲೈನ್​ ವಿಡಿಯೋ ಪ್ಲಾಟ್ ​ಫಾರ್ಮ್ ಯೂಟ್ಯೂಬ್​ ಕಂಪನಿಯು ​​ತನ್ನ ಪ್ರಸಿದ್ಧ ಫೀಚರ್ ​​ವೊಂದನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.

Join Our Whatsapp Group

ಸ್ಟೋರೀಸ್ ಫೀಚರ್​ ಗೆ ವಿದಾಯ ಹೇಳಲಿರುವ ಯೂಟ್ಯೂಬ್​, ಜೂನ್‌ 26ರಿಂದ ಇದನ್ನು ಬಂದ್​ ಮಾಡಲಿದೆ. ಸ್ಟೋರಿಸ್ ಫೀಚರ್​ ಎಂಬುದು ತಾತ್ಕಾಲಿಕ ಪೋಸ್ಟ್ ಫಾರ್ಮ್ಯಾಟ್ ಆಗಿದ್ದು, ಬಳಕೆದಾರರು ಆ ದಿನದಿಂದ ಯಾವುದೇ ಹೊಸ ಸ್ಟೋರಿಸ್ ಪೋಸ್ಟ್ ಮಾಡಲು ಸಾಧ್ಯವಿಲ್ಲ ಮತ್ತು ಈಗಾಗಲೇ ಮಾಡಿರುವ ಪೋಸ್ಟ್‌ಗಳು ಕೂಡ ಏಳು ದಿನಗಳ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ.

ಇನ್ ​ಸ್ಟಾಗ್ರಾಮ್​ ಮತ್ತು ಫೇಸ್ ​ಬುಕ್​ ಹೊರತುಪಡಿಸಿ, ಇತರ ಸಾಮಾಜಿಕ ಜಾಲತಾಣಗಳು ಸ್ಟೋರಿಸ್ ಎಂಬ ವೈಶಿಷ್ಟ್ಯದೊಂದಿಗೆ ಯಶಸ್ಸನ್ನು ಕಂಡಿಲ್ಲ. ಈ ಹಿಂದೆ ಟ್ವಿಟ್ಟರ್​ 2021ರಲ್ಲಿ ಫ್ಲೀಟ್ಸ್ ಎಂಬ ಇದೇ ರೀತಿಯ ವೈಶಿಷ್ಟ್ಯವನ್ನು ಪ್ರಾರಂಭಿಸಿ ಅದೇ ವರ್ಷ ಮತ್ತೆ ಹಿಂತೆಗೆದುಕೊಂಡಿತ್ತು.