ಮನೆ ಅಪರಾಧ ರಾಜಕೀಯ ದ್ವೇಷ: ಎರಡು ಗುಂಪುಗಳ ನಡುವೆ ಗಲಾಟೆ

ರಾಜಕೀಯ ದ್ವೇಷ: ಎರಡು ಗುಂಪುಗಳ ನಡುವೆ ಗಲಾಟೆ

0

ತುಮಕೂರು: ರಾಜಕೀಯ ದ್ವೇಷಕ್ಕಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಓರ್ವ ಗಾಯಗೊಂಡಿರುವ ಘಟನೆ ಮಧುಗಿರಿ ತಾಲೂಕಿನ ಕಡಗತ್ತೂರು ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಸೋತಿರುವ ವಿಚಾರಕ್ಕೆ ಜೆಡಿಎಸ್​​ ಮುಖಂಡ ಮುದ್ದಪ್ಪ ಹಾಗೂ ಕಾಂಗ್ರೆಸ್ ಮುಖಂಡ ಕೃಷ್ಣಪ್ಪ ಮಧ್ಯೆ ವಾಗ್ವಾದ ನಡೆದಿದೆ.

ಈ ಬಳಿಕ ಕೃಷ್ಣಪ್ಪನ ಕಡೆಯವರು ಮುದ್ದಪ್ಪ ಬೈಕ್​’ಗೆ ಬೆಂಕಿ ಹಚ್ಚಿದ್ದಾರೆ ಆರೋಪ ಕೇಳಿಬಂದಿದೆ. ಇದಕ್ಕೆ ಪ್ರತೀಕಾರವಾಗಿ ಮುದ್ದಪ್ಪನ ಕಡೆಯವರು ಕೃಷ್ಣಪ್ಪ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪವಿದೆ.

ಇದರಿಂದ ಕೃಷ್ಣಪ್ಪನ ತಲೆಗೆ ಗಾಯ‌ವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.