ಮನೆ ರಾಜ್ಯ ಶೀಘ್ರದಲ್ಲೇ ರಾಜ್ಯದ ಜನರಿಗೆ ಒಳ್ಳೆಯ ಸುದ್ದಿ: ಕಾರ್ಮಿಕ ಸಚಿವ ಸಂತೋಷ್ ಲಾಡ್

ಶೀಘ್ರದಲ್ಲೇ ರಾಜ್ಯದ ಜನರಿಗೆ ಒಳ್ಳೆಯ ಸುದ್ದಿ: ಕಾರ್ಮಿಕ ಸಚಿವ ಸಂತೋಷ್ ಲಾಡ್

0

ಹುಬ್ಬಳ್ಳಿ: ಜೂನ್ 1 ರಂದು ಮೊದಲ ಸಚಿವ ಸಂಪುಟ ಸಭೆ ನಡೆಯಲಿದ್ದು, ‘ಗ್ಯಾರಂಟಿ’ ಕಾರ್ಯಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಶೀಘ್ರದಲ್ಲೇ ರಾಜ್ಯದ ಜನರಿಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

Join Our Whatsapp Group

ಸಚಿವರಾದ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಗೆ ಮಂಗಳವಾರ ಬಂದ ಅವರು, ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ಬಾರಿ ಕಾರ್ಮಿಕ ಸಚಿವನಾಗಿದ್ದಾಗ ಕಡಿಮೆ ಸಮಯ ಸಿಕ್ಕಿತ್ತು. ಈಗ ಮತ್ತೆ ಅದೇ ಖಾತೆ ಸಿಕ್ಕಿರುವುದರಿಂದ ಹೆಚ್ಚಿನ ಕೆಲಸ ಮಾಡುವ, ಕಾರ್ಯಕ್ರಮಗಳನ್ನು ನೀಡುವ ಗುರಿಯಿದೆ ಎಂದರು.

ಕಾರ್ಮಿಕ ಕಲ್ಯಾಣ ನಿಧಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪದ ಕುರಿತ ಪ್ರಶ್ನೆಗೆ, ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಹಿಂದಿನ ಲೇಖನವೈಷ್ಣೋದೇವಿ ದರ್ಶನಕ್ಕೆ ಬರುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 10 ಮಂದಿ ದುರ್ಮರಣ
ಮುಂದಿನ ಲೇಖನರಾಜಕೀಯ ದ್ವೇಷ: ಎರಡು ಗುಂಪುಗಳ ನಡುವೆ ಗಲಾಟೆ