ಪ್ರಸಿದ್ಧ ಕಂಪನಿ ಒನ್ ಪ್ಲಸ್ ಈಗೀಗ ತನ್ನ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದನ್ನು ಕಡಿಮೆ ಮಾಡಿದೆ. ಭಾರತದಲ್ಲಿ ತನ್ನ ಹೊಸ ನಾರ್ಡ್ ಸರಣಿಯನ್ನು ಘೋಷಣೆ ಮಾಡಿದ್ದಷ್ಟೆ ಬಿಟ್ಟರೆ ಇನ್ನೂ ಬಿಡುಗಡೆ ಆಗಿಲ್ಲ. ಒನ್ ಪ್ಲಸ್ ಕಂಪನಿ ಈ ವರ್ಷ ಮೊದಲು ರಿಲೀಸ್ ಮಾಡಿದ್ದು ಒನ್ ಪ್ಲಸ್ 11 5ಜಿ ಫೋನನ್ನು. ಇದು ದೇಶದಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ಹೀಗಿರುವಾಗ ಕಂಪನಿ ದಿಢೀರ್ ಆಗಿ ಒನ್ ಪ್ಲಸ್ 11 ಮಾರ್ಬಲ್ ಒಡಿಸ್ಸಿ ಆವೃತ್ತಿಯನ್ನು ಅನಾವರಣ ಮಾಡಿದೆ. ಇದು ವಿಶೇಷ ಆವೃತ್ತಿಯಾಗಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ.
ಬೆಲೆ ಎಷ್ಟು?:
ಒನ್ ಪ್ಲಸ್ 11 5G ಮಾರ್ಬಲ್ ಒಡಿಸ್ಸಿ ಆವೃತ್ತಿ ಸ್ಮಾರ್ಟ್ ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 16GB RAM ಮತ್ತು 256GB ಸ್ಟೋರೇಜ್ ಆಯ್ಕೆಗೆ 64,999 ರೂ. ನಿಗದಿ ಮಾಡಲಾಗಿದೆ. ಇದು ಇದೇ ಜೂನ್ 6 ರಿಂದ ಒನ್ ಪ್ಲಸ್ ಇಂಡಿಯಾ ವೆಬ್ ಸೈಟ್ ನಲ್ಲಿ ಖರೀದಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಏನು ಫೀಚರ್ಸ್?:
ಒನ್ಪ್ಲಸ್ 11 5G ಸ್ಮಾರ್ಟ್ಫೋನ್ 1,440×3,216 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಹೊಂದಿರುವ 6.7 ಇಂಚಿನ ಕ್ವಾಡ್ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಅಮೋಲೆಡ್ ಸ್ಕ್ರೀನ್ ಅಗಿದೆ. 1,000Hz ವರೆಗಿನ ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿರುವುದು ವಿಶೇಷ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 2 SoC ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 13-ಆಧಾರಿತ OxygenOS 13 ಔಟ್-ಆಫ್-ದಿ-ಬಾಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್ ನೀಡಲಾಗಿದೆ. ಇದು ಅತ್ಯುತ್ತಮ ಕ್ವಾಲಿಟಿಯ ಫೋಟೋ ಸೆರೆ ಹಿಡಿಯುತ್ತದೆ. ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಪಡೆದಿದೆ. ಹಾಗೆಯೆ ಮುಂಭಾಗ ಸೆಲ್ಫೀಗಾಗಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಒನ್ ಪ್ಲಸ್ 11 ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ತಕ್ಕಂತೆ 100W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಸಪೋರ್ಟ್ ಆಗುತ್ತದೆ. ಉಳಿದಂತೆ 4G, Wi-Fi 7, ಬ್ಲೂಟೂತ್ 5.3, GPS , A-GPS, NFC, ಮತ್ತು USB 2.0 ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ನೀಡಲಾಗಿದೆ. ಒನ್ ಪ್ಲಸ್ 11 5G ಜೊತೆಗೆ ಒನ್ ಪ್ಲಸ್ 11R 5G ಸ್ಮಾರ್ಟ್ ಫೋನ್ ಕೂಡ ಬಿಡುಗಡೆ ಆಗಿದೆ. ಇದರ ಆರಂಭಿಕ ಬೆಲೆ 39,999 ರೂ. ಆಗಿದ್ದು ಫೆಬ್ರವರಿ 28 ರಿಂದ ಖರೀದಿಗೆ ಸಿಗುತ್ತದೆ.
ವೇದವ್ಯಾಸಚಾರ್ ಶ್ರೀಷಾನಂದರ ಮೇಲೆ ಸುಪ್ರೀಂ ಕೋರ್ಟ್ ಗರಂ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಲ್ಲದ ಎತ್ತೆತ್ತರ ಏರುತ್ತಿರುವ ಅಕ್ರಮ ಕಟ್ಟಡಗಳು….
ಬಳ್ಳಾರಿಯಲ್ಲಿ ಸ್ಟಾಪ್ ನರ್ಸ್ ಹುದ್ದೆಗಳಿಗೆ ಭರ್ತಿ….
ಕೆಪಿಎಸ್ಸಿ ಯಿಂದ ಕೃಷಿ ಇಲಾಖೆಯಲ್ಲಿ ಹುದ್ದೆಗಳು
ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಹುದ್ದೆಗಳು
ಮೈಸೂರಿನಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಪ್ರೊಫೆಸರ್ ಹುದ್ದೆಗಳು
ಕೆಪಿಎಸ್ಸಿ ಹುದ್ದೆಯ 327 ಗ್ರೂಪ್ ಬಿ ಗ್ರೂಪ್ ಸಿ ಹುದ್ದೆಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ
ಹೊಸ್ತಿಲ ಪೂಜೆ ಮಾಡಿದರೆ ಏನು ಲಾಭ ಗೊತ್ತಾ..
ವಿವಾಹಿತ ಮಹಿಳೆಯರ ಶೋಭೆ ಹೆಚ್ಚಿಸುವ ತಾಳಿ ಕುಂಕುಮ ಮತ್ತು ಕಾಲುಂಗುರದ ಮಹತ್ವ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.