ಮನೆ ಅಪರಾಧ ಕೆಆರ್​ ಡಿಎಲ್ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ: ಅಪಾರ ಪ್ರಮಾಣದ ಆಸ್ತಿ ಪತ್ತೆ

ಕೆಆರ್​ ಡಿಎಲ್ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ: ಅಪಾರ ಪ್ರಮಾಣದ ಆಸ್ತಿ ಪತ್ತೆ

0

ಕೊಪ್ಪಳ: ಕೆಆರ್​ ಡಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್​ ಝರಣಪ್ಪ ಚಿಂಚೋಳಿಕರ್ ಮನೆ ಮೇಲೆ ಬರೊಬ್ಬರಿ 26 ಗಂಟೆಗಳ ಕಾಲ ಲೋಕಾಯುಕ್ತ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.

Join Our Whatsapp Group

ಝರಣಪ್ಪ ಚಿಂಚೋಳಿಕರ್ ಬಳಿ 3.5 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಕಲಬುರಗಿ ನಗರದಲ್ಲಿ 4 ಸಾವಿರ ಚದರ ಅಡಿ ನಿರ್ಮಾಣ ಹಂತದ ಮನೆ, ಬೀದರ್ ​​ನಲ್ಲಿ 2 ಅಂತಸ್ತಿನ ಮನೆ, ಫಾರ್ಮ್ ​ಹೌಸ್ ದಾಖಲೆ ಪತ್ರ ಸಿಕ್ಕಿದೆ.

ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಬಳಿಯ ಫಾರ್ಮ್ ​​ಹೌಸ್ ನಿರ್ಮಾಣ ಮಾಡಲಾಗಿದ್ದು, ಖಾಸಗಿ ಬ್ಯಾಂಕ್​​​ ಖಾತೆಯಲ್ಲಿ ಬರೊಬ್ಬರಿ 1.5 ಕೋಟಿ ನಿಶ್ಚಿತ ಠೇವಣಿ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.