ಮನೆ ಯೋಗಾಸನ ಬಕಾಸನ (ಪದ್ಮಾಸನ ಸಹಿತ)

ಬಕಾಸನ (ಪದ್ಮಾಸನ ಸಹಿತ)

0

ಬಕಾಸನ (ಪದ್ಮಾಸನ ಸಹಿತವಾದ)ಕ್ಕೆ ಊರ್ಧ್ವ ಕುಕ್ಕುಟಾಸನವೆಂದೂ ಹೆಸರುಂಟು.  ಹೆಸರಿನಲ್ಲಿ ವ್ಯತ್ಯಾಸ ತೋರಿಬಂದರೂ, ಅವುಗಳ ಲಾಭದಲ್ಲಿ ಮಾತ್ರ ವ್ಯತ್ಯಾಸವಿಲ್ಲ.

Join Our Whatsapp Group

ಮಾಡುವ ಕ್ರಮ

ಈ ಆಸನವನ್ನು ಸಾಮಾನ್ಯವಾಗಿ ಎರಡು ವಿಧವಾಗಿ ಮಾಡಬಹುದು:  1) ಯೋಗಾಭ್ಯಾಸಿಯು ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ ಎರಡೂ ಕೈಗಳನ್ನು ಶರೀರದ ಮುಂದೆ ಒಂದೂವರೆಯಿಂದ ಎರಡು ಅಡಿ ಅಂತರದಲ್ಲಿ ಊರಬೇಕು. ಹಾಗೆ ಊರಿದ ಕೈಗಳ ಮೇಲೆ ತನ್ನ ಶರೀರವನ್ನು ಚಿತ್ರದಲ್ಲಿ ತೋರಿಸುವಂತೆ ಸಮತೋಲನದಲ್ಲಿ ನಿಲ್ಲಿಸಿಕೊಳ್ಳಬೇಕು. ಹೀಗೆ ಸಮತೋಲನದ ಸ್ಥಿತಿಯಲ್ಲಿ ನಮ್ಮ ಕಾಲಿನ ಮಂಡಿಗಳು ಕಂಕಳುಗಳು ಪಕ್ಕದಲ್ಲಿ ಇರಬೇಕು.

2) ಮೊದಲು ಶೀರ್ಷಾಸನ ಮಾಡಿ, ಆ ಸ್ಥಿತಿಯಲ್ಲೇ ಪದ್ಮಾಸನ ಹಾಕಬೇಕು. ಅನಂತರ ಪದ್ಮಾಸನದ ಆ ಸ್ಥಿತಿಯಲ್ಲೇ ಎದೆಗೆ ಎರಡೂ ಕಾಲಿನ ಮಂಡಿಗಳು ತಗಲುವಂತೆ ಶರೀರವನ್ನು ಮುಂದಕ್ಕೆ ಬಗ್ಗಿಸಬೇಕು. ಒಮ್ಮೆ ಈ ಸ್ಥಿತಿಯಲ್ಲಿ ಸಮತೋಲನ ಪಡೆದ ನಂತರ ನಿಧನವಾಗಿ ತಲೆಯನ್ನು ನೆಲದಿಂದ ಮೇಲಕ್ಕೆತ್ತಬೇಕು. ಈ ಸ್ಥಿತಿಯಲ್ಲಿ ಎಂದೂ ಸಮತೋಲನ ಕಳೆದುಕೊಳ್ಳಬಾರದು –ಮತ್ತು ಈ ಸ್ಥಿತಿಯಲ್ಲೇ ನಿಧನವಾಗಿ ಉಸಿರಾಡಬೇಕು. ಆಸನದ ಅವಧಿ ಒಂದರಿಂದ ಒಂದೂವರೆ ನಿಮಿಷ.

ಲಾಭಗಳು: ಕೈಕಾಲುಗಳು ಶಕ್ತವಾಗುವುವು. ಬೆನ್ನಲುಬು ಚೆನ್ನಾಗಿ ಹಿಗ್ಗುವುದು. ಕಿಬ್ಬೊಟ್ಟೆಯ ಎಲ್ಲ ಅಂಗಗಳೂ ಸಬಲವಾಗುವುವು. ಎದೆಯಿಂದ ಕತ್ತಿನವರೆಗಿನ ಎಲ್ಲ ಅವಯವಗಳೂ ಚಟುವಟಿಕೆ ಪಡೆಯುವವು.