ಬೆಂಗಳೂರು: ಕಳಸ ತಾಲೂಕು ಸರ್ಕಾರಿ ಕರ್ತವ್ಯನಿರತ ವೈದ್ಯನ ವಿರುದ್ಧ ಮದ್ಯಸೇವನೆ ಆರೋಪ ಹಿನ್ನಲೆ ವೈದ್ಯ ಬಾಲಕೃಷ್ಣ ಅಮಾನತ್ತಿಗೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಚಿಕ್ಕಮಗಳೂರು ಡಿಹೆಚ್’ಒಗೆ ಆದೇಶ ನೀಡಿದ್ದಾರೆ.
ಆರೋಪ ಕುರಿತು ತನಿಖೆ ಮಾಡಿ ವರದಿ ಸಲ್ಲಿಸುವಂತೆಯೂ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ.
ಮದ್ಯಸೇವನೆಯಿಂದಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ವೇಳೆ ಕುಸಿದುಬಿದಿದ್ದಾರೆ. ವೈದ್ಯನ ಅವಾಂತರದಿಂದ ಶಸ್ತ್ರಚಿಕಿತ್ಸೆಗೆ ಬಂದಿದ್ದ ಮಹಿಳೆಯರು ಪರದಾಡುವಂತಾಗಿದೆ.
ಚಿಕ್ಕಮಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಉಮೇಶ್ ಈ ಕುರಿತು ಪ್ರತಿಕ್ರಿಯಿಸಿಘಟನೆ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.