ಮನೆ ಉದ್ಯೋಗ ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕ: ನೇರ ಸಂದರ್ಶನಕ್ಕೆ ಆಹ್ವಾನ

ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕ: ನೇರ ಸಂದರ್ಶನಕ್ಕೆ ಆಹ್ವಾನ

0

ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಅಗತ್ಯ ಇರುವ ಪೋಸ್ಟ್‌ ಗ್ರಾಜುಯೇಟ್‌ ಟೀಚರ್, ಕಂಪ್ಯೂಟರ್ ಸಹಾಯಕರು, ಲ್ಯಾಬೋರೇಟರಿ ಅಸಿಸ್ಟಂಟ್, ಆಫೀಸ್ ಅಸಿಸ್ಟಂಟ್, ಪ್ರೈಮರಿ ಟೀಚರ್‌, ಇತರೆ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು, ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

Join Our Whatsapp Group

ಹುದ್ದೆಗಳಲ್ಲಿ ಆಸಕ್ತಿ ಇರುವವರು, ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಜೂನ್ 01 ರಿಂದ 05 ರವರೆಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆಗಳ ವಿವರ

ಪೋಸ್ಟ್‌ ಗ್ರಾಜುಯೇಟ್‌ ಟೀಚರ್ : 6

ಕಂಪ್ಯೂಟರ್ ಅಸಿಸ್ಟಂಟ್ : 1

ಟ್ರೈನ್ಡ್‌ ಗ್ರಾಜುಯೇಟ್‌ ಟೀಚರ್ : 8

ವರ್ಕ್‌ ಎಕ್ಸ್‌ಪೀರಿಯನ್ಸ್‌ ಟೀಚರ್ (WET) : 6

ಸೆಮಿ – ಪ್ರೊಫೇಶನಲ್ ಅಸಿಸ್ಟಂಟ್ (ಲೈಬ್ರರಿ) : 2

ಪ್ರೈಮರಿ ಟೀಚರ್ : 2

ಪ್ರೀ-ಪ್ರೈಮರಿ ಟೀಚರ್ : 3

ವೊಕೇಷನಲ್ ಟೀಚರ್ : 2

ಲ್ಯಾಬೋರೇಟರಿ ಅಸಿಸ್ಟಂಟ್ : 3

ಆಫೀಸ್ ಅಸಿಸ್ಟಂಟ್ : 1

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಎಂಎ, ಎಂ.ಇಡಿ / ಬಿಎ, ಬಿ.ಇಡಿ / ಪದವಿ ಪಾಸ್‌ ಮಾಡಿರಬೇಕು.

ನೇರ ಸಂದರ್ಶನ ದಿನಾಂಕ : ಜೂನ್ 01-05, 2023.

ಯಾವ ಹುದ್ದೆಗೆ ಎಷ್ಟು ಗಂಟೆಗೆ ಸಂದರ್ಶನ, ಎಷ್ಟು ವರ್ಷ ಮೀರಿರಬಾರದು, ನಿಗಧಿತ ವಿದ್ಯಾರ್ಹತೆಗಳು ಏನು ಎಂಬುದರ ಸವಿವರ ಮಾಹಿತಿಯನ್ನು ಕೆಳಗಿನ ನೋಟಿಫಿಕೇಶನ್‌ ಪಿಡಿಎಫ್‌ ಫೈಲ್ ಓದಿ ತಿಳಿಯಬಹುದು.

ನೇರ ಸಂದರ್ಶನಕ್ಕೆ ಹಾಜರಾಗುವವರು ಎಸ್‌ಎಸ್ಎಲ್‌ಸಿ ಅಂಕಪಟ್ಟಿ, ಹುದ್ದೆಗೆ ನಿಗಧಿತ ವಿದ್ಯಾರ್ಹತೆ ಹಾಗೂ ಕಾರ್ಯಾನುಭವ ದಾಖಲೆ, ಅಪ್‌ಡೇಟೆಡ್‌ ಬಯೋಡಾಟಾ, ಆಧಾರ್‌ ಕಾರ್ಡ್‌ ಅನ್ನು ತಪ್ಪದೇ ಹಾಜರುಪಡಿಸಬೇಕು.

ನೇರ ಸಂದರ್ಶನ ಸ್ಥಳ : ರೀಜನಲ್ ಇನ್‌ ಸ್ಟಿಟ್ಯೂಟ್‌ ಆಫ್‌ ಎಜುಕೇಷನ್‌, ಮೈಸೂರು- 570006.