ಮನೆ ಪ್ರವಾಸ ಬೆಂಗಳೂರಿನಿಂದ ಸೋಲೊ ಟ್ರಿಪ್ ಮಾಡಲು ಈ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ

ಬೆಂಗಳೂರಿನಿಂದ ಸೋಲೊ ಟ್ರಿಪ್ ಮಾಡಲು ಈ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ

0

ಬೆಂಗಳೂರಿನಿಂದ ಸೋಲೊ ಟ್ರಿಪ್ ಮಾಡಲು ನೀವು ಬಯಸಿದರೆ ಜೂನ್ ತಿಂಗಳಿನಲ್ಲಿಯು ಹೋಗಬಹುದು. ಸೋಲೊ ಟ್ರಿಪ್ ನಿಮಗೆ ಸಾಕಷ್ಟು ಸುಂದರವಾದ ಅನುಭವವನ್ನು ನೀಡುತ್ತದೆ. ಯಾರ ಅಡೆತಡೆಯಿಲ್ಲದೆ ಹಕ್ಕಿಯಂತೆ ನಿಮ್ಮ ನೆಚ್ಚಿನ ಸ್ಥಳಗಳನ್ನು ಅನ್ವೇಷಿಸಬಹುದು.

Join Our Whatsapp Group

ತಂಪಾದ ಸ್ಥಳ, ಪ್ರಕೃತಿ ಅನ್ವೇಷಣೆ, ಸಾಹಸ ಚಟುವಟಿಕೆ, ಪಾರಂಪರಿಕ ಸ್ಥಳಗಳ ಅನ್ವೇಷಣೆಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಜೂನ್ ತಿಂಗಳಿನ ಹವಾಮಾನಕ್ಕೆ ತಕ್ಕ ಅದ್ಭುತ ಸ್ಥಳಗಳು ಇಲ್ಲಿವೆ ಓದಿ.

ಹಂಪಿ

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ಸೋಲೊ ಟ್ರಿಪ್ ಮಾಡಲು ಸೂಕ್ತವಾದ ತಾಣವಾಗಿದೆ. ಇಲ್ಲಿನ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಒಂದೊಂದಾಗಿ ಸಂದರ್ಶಿಸಬಹುದು. 500 ಪುರಾತನ ಸ್ಮಾರಕಗಳು, ಸುಂದರವಾದ ದೇವಾಲಯಗಳು ಇಲ್ಲಿ ನೆಲೆಸಿವೆ. ವಿಜಯನಗರ ಕಾಲವನ್ನು ನೆನಪಿಸುವ ಈ ತಾಣದಲ್ಲಿ ರಾಕ್ ಕ್ಲೈಂಬಿಂಗ್,ಸೈಕ್ಲಿಂಗ್ ನಂತಹ ಥ್ರಿಲ್ಲಿಂಗ್ ಚಟುವಟಿಕೆಗಳನ್ನು ಆನಂದಿಸಬಹುದು.

ಗೋವಾ

ಬೆಂಗಳೂರಿನಿಂದ ನೀವು ಏಕಾಂಗಿಯಾಗಿ ಪ್ರವಾಸ ಮಾಡಲು ಬಯಸಿದರೆ ಗೋವಾ ರಾಜ್ಯಕ್ಕೆ ಭೇಟಿ ನೀಡಿ. ಪ್ರಶಾಂತವಾದ ಕಡಲತೀರ, ವರ್ಣರಂಜಿತ ರಾತ್ರಿಯ ಜೀವನ, ರುಚಿ ರುಚಿಯಾದ ಸಮುದ್ರಾಹಾರ, ಸಾಹಸ ಚಟುವಟಿಕೆಗಳನ್ನು ಇಲ್ಲಿ ಆನಂದಿಸಬಹುದು.

ಗೋವಾದಲ್ಲಿ ಬಜೆಟ್ ಸ್ನೇಹಿ ತಂಗಲು ಹೋಂ ಸ್ಟೇಗಳು ಸಿಗುತ್ತವೆ. ಐತಿಹಾಸಿಕ ಕೋಟೆ ಹಾಗು ಚರ್ಚುಗಳಿಗೆ ಹೋಗಿ. ಗೋವಾ ಟ್ರಿಪ್ ಸ್ವಲ್ಪ ಡಿಫರೆಂಟ್ ಆಗಿ ಮಾಡಲು ಗೋವಾ ಗ್ರಾಮಗಳಿಗೆ ಭೇಟಿ ನೀಡಿ.

ಗೋಕರ್ಣ

ಗೋವಾ ಪರ್ಯಾಯವಾಗಿ ನೀವು ಕರ್ನಾಟಕದ ಗೋಕರ್ಣಕ್ಕೆ ಹೋಗಬಹುದು. ಆಧ್ಯಾತ್ಮಿಕ ಹಾಗು ರೋಮಾಂಚಕ ಪ್ರವಾಸದ ಸಮ್ಮಿಶ್ರಣ ಇದಾಗಿರುತ್ತದೆ. ಗೋಕರ್ಣದ ಉಸಿರುಕಟ್ಟುವ ಭೂದೃಶ್ಯಗಳು, ಪ್ರಾಚೀನ ಕಡಲತೀರಗಳು ಬೀಚ್ ಪ್ರೇಮಿಗಳನ್ನು ಸೆಳೆಯುತ್ತದೆ.

ಓಂ ಬೀಚ್, ಮಹಾಬಲೇಶ್ವರ ದೇವಾಲಯ, ಪ್ಯಾರಡೇಸ್ ಬೀಚ್, ಕೂಡ್ಲೆ ಬೀಚ್, ಗೋಕರ್ಣ ಬೀಚ್ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ.

ಮಂಗಳೂರು

ಅರೇಬಿಯನ್ ಸಮುದ್ರ ಮತ್ತು ಪಶ್ಚಿಮ ಘಟ್ಟಗಳ ನಡುವೆ ನೆಲೆಸಿರುವ ಮಂಗಳೂರಿಗೆ ನೀವು ಏಕಾಂಗಿಯಾಗಿ ಸೋಲೊ ಟ್ರಿಪ್ ಮಾಡಬಹುದು. ತೂಗಾಡುವ ತೆಂಗಿನ ಮರಗಳು, ಘರ್ಜಿಸುವ ಕಡಲತೀರಗಳು, ಮಹಿಮಾನ್ವಿತ ಆಲಯಗಳು ಇಲ್ಲಿವೆ.

ಮಂಗಳೂರಿನ ರುಚಿಕರವಾದ ಸಮುದ್ರ ಭಕ್ಷ್ಯಗಳು ನಿಮ್ಮ ನಾಲಿಗೆಯನ್ನು ಸಂತೃಪ್ತಿಗೊಳಿಸಬಹುದು. ಕುದ್ರೋಳಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಸೋಮೇಶ್ವರ ಬೀಚ್, ಪಣಂಬೂರು ಬೀಚ್, ತಣ್ಣೀರು ಬಾವಿ ಬೀಚ್ ಇನ್ನು ಸಾಕಷ್ಟು ಕಡಲತೀರಗಳನ್ನು ಏಕಾಂಗಿಯಾಗಿ ಸಂದರ್ಶಿಸಬಹುದು.

ಉಡುಪಿ

ಏಕಾಂಗಿಯಾಗಿ ಉಡುಪಿಯ ಪ್ರವಾಸ ಅನೇಕ ಅನುಭವಗಳನ್ನು ಒದಗಿಸುತ್ತದೆ. ಕರ್ನಾಟಕದ ಕರಾವಳಿ ಪಟ್ಟಣವಾಗಿರುವ ಉಡುಪಿಯಲ್ಲಿ ಪುರಾತನ ಆಲಯಗಳು, ಸುಂದರ ಕಡಲತೀರಗಳಿವೆ. ಮಂಗಳೂರಿನಿಂದ ಉಡುಪಿ ಕೇವಲ 60 ಕಿ.ಮೀ ದೂರದಲ್ಲಿದೆ.

ಕಡಲತೀರ ಪ್ರೇಮಿ ನೀವಾಗಿದ್ದರೆ ಉಡುಪಿಗೆ ಹೋಗಿ. ಅನೇಕ ಸಾಹಸ ಚಟುವಟಿಕೆ ಕೈಗೊಳ್ಳಿ ಜೊತೆಗೆ ಉಡುಪಿಯ ಗುಪ್ತ ರತ್ನವಾಗಿರುವ ದ್ವೀಪಕ್ಕೆ ಹೋಗಿ ಬನ್ನಿ.