ಮನೆ ಅಪರಾಧ ಕಾರು-ಲಾರಿ ನಡುವೆ ಅಪಘಾತ: ಇಬ್ಬರ ಸಾವು

ಕಾರು-ಲಾರಿ ನಡುವೆ ಅಪಘಾತ: ಇಬ್ಬರ ಸಾವು

0

ಚಿತ್ರದುರ್ಗ: ಕಾರು ಹಾಗೂ ಲಾರಿ ನಡುವೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸೀಬಾರ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಮೃತ ಶಿವರಾಮ್ (45) ಹಾಗೂ ಚೇತನ್ ಕುಮಾರ್ (30) ಬೆಂಗಳೂರಿನ ವೈಟ್‌ಫೀಲ್ಡ್ ನಿವಾಸಿಗಳಾಗಿದ್ದಾರೆ.

ಸ್ವಾಮಿ (55) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಗೋವಾದಿಂದ ಬೆಂಗಳೂರಿಗೆ ಮರಳುತ್ತಿತ್ತು. ಮುಭಾಗದಲ್ಲಿ ಸಾಗುತ್ತಿದ್ದ ಲಾರಿ ಪಂಚರ್ ಆಗಿದೆ. ವೇಗವಾಗಿ ಬರುತ್ತಿದ್ದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.