ಮನೆ ಮನರಂಜನೆ ಜನ್ಮದಿನದಂದು ಬ್ರೇಕಿಂಗ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ:  ಒಂದೇ ಪಾರ್ಟ್’​​ನಲ್ಲಿ ಮುಗಿಯಲ್ಲ ‘ಸಪ್ತ ಸಾಗರದಾಚೆ ಎಲ್ಲೋ’

ಜನ್ಮದಿನದಂದು ಬ್ರೇಕಿಂಗ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ:  ಒಂದೇ ಪಾರ್ಟ್’​​ನಲ್ಲಿ ಮುಗಿಯಲ್ಲ ‘ಸಪ್ತ ಸಾಗರದಾಚೆ ಎಲ್ಲೋ’

0

ಇಂದು (ಜೂನ್ 6) ರಕ್ಷಿತ್ ಶೆಟ್ಟಿ ಅವರ ಜನ್ಮದಿನ. ಈ ವಿಶೇಷ ದಿನದಂದು ರಕ್ಷಿತ್ ಶೆಟ್ಟಿ ಕಡೆಯಿಂದ ಈ ಘೋಷಣೆ ಆಗಿದೆ. ಪಾರ್ಟ್​ ಎ ಹಾಗೂ ಪಾರ್ಟ್​ ಬಿ ಆಗಿ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್ ಆಗಲಿದೆ.

Join Our Whatsapp Group

ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಆ ಬಳಿಕ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡರು. ಸಿನಿಮಾ ಕೆಲಸಗಳ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಅವರು ಎಂದಿಗೂ ಗಡಿಬಿಡಿ ಮಾಡಿದವರಲ್ಲ. ತುಂಬಾನೇ ಶ್ರದ್ಧೆಯಿಂದ ಅವರು ಸಿನಿಮಾ ಮಾಡುತ್ತಾರೆ. ಈ ಕಾರಣಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಸಾಕಷ್ಟು ಸಮಯ ಹಿಡಿದಿದೆ. ಈಗ ಈ ಸಿನಿಮಾ ಎರಡು ಭಾಗದಲ್ಲಿ ಬರುತ್ತಿರುವ ಘೋಷಣೆ ಕೇಳಿ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

ಹೀರೋ/ಹೀರೋಯಿನ್ ​ಗಳ ಬರ್ತ್​ಡೇ ದಿನ ವಿಶೇಷ ಪೋಸ್ಟರ್, ಟೀಸರ್ ರಿಲೀಸ್ ಆಗೋದು ಕಾಮನ್. ಅದೇ ರೀತಿ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತಂಡದ ಕಡೆಯಿಂದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಎರಡು ಭಾಗದಲ್ಲಿ ಸಿನಿಮಾ ಬರುತ್ತಿದೆ ಎಂದಿರುವ ಚಿತ್ರತಂಡ ಜೂನ್ 15ರಂದು ರಿಲೀಸ್ ದಿನಾಂಕ ಅನೌನ್ಸ್​ ಮಾಡಲಿದೆ.

 ‘ನಿಮ್ಮ ಮನು ಇಂದು ವಿಶೇಷ ಪ್ರಕಟಣೆಯೊಂದಿಗೆ ಬಂದಿದ್ದಾನೆ. ಸಮಯ, ಪ್ರೀತಿ ಮತ್ತು ಕನಸುಗಳ SSE ಈಗ ಎರಡು ಭಾಗಗಳಲ್ಲಿ ನಿಮ್ಮ ಮುಂದೆ ತರಲಾಗುತ್ತಿದೆ. ಸೈಡ್ ಎ ಮತ್ತು ಸೈಡ್ ಬಿ. ಚಿತ್ರದ ಚಿತ್ರೀಕರಣ ಮುಗಿದಿದೆ. ಎರಡೂ ಪಾರ್ಟ್ ​​ಗಳ ಬಿಡುಗಡೆ ದಿನಾಂಕವನ್ನು ಜೂನ್ 15 ರಂದು ಪ್ರಕಟಿಸಲಾಗುವುದು’ ಎಂದು ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದಾರೆ.

ಈ ಸಿನಿಮಾದ ಮೂಲಕ ಒಂದು ಗಂಭೀರವಾದ ಪ್ರೇಮಕತೆಯನ್ನು ನಿರ್ದೇಶಕ ಹೇಮಂತ್​ ರಾವ್​ ಹೇಳಲಿದ್ದಾರೆ. ರಕ್ಷಿತ್ ​ಗೆ ಜೊತೆಯಾಗಿ ರುಕ್ಮಿಣಿ ವಸಂತ್​ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಇದೆ. ಈ ಮೊದಲು ರಿಲೀಸ್ ಆದ ರಕ್ಷಿತ್-ಹೇಮಂತ್ ಕಾಂಬಿನೇಷನ್​ ನ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಕೂಡ ಗಂಭೀರ ಕಥೆಯನ್ನೇ ಹೊಂದಿತ್ತು.