ಹಾವೇರಿ: ಶೀಲ ಶಂಕಿಸಿ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ಸಂಗೂರು ಗ್ರಾಮದಲ್ಲಿ ನಡೆದಿದೆ.
ದ್ರಾಕ್ಷಾಣೆವ್ವ (45) ಕೊಲೆಯಾದ ಮಹಿಳೆ. ಪ್ರಭು ವಾರತಿ (52) ಆತ್ಮಹತ್ಯೆ ಮಾಡಿಕೊಂಡ ಪತಿ.
ಹೆಂಡತಿಯ ಮೇಲೆ ಅನುಮಾನ ಹೊಂದಿದ್ದ ಪ್ರಭು ವಾರತಿ ಪ್ರತಿದಿನ ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ. ನಿನ್ನೆಯು ಇಬ್ಬರಿಗೂ ಜಗಳವಾಗಿದ್ದು, ಜಗಳ ಅತಿರೇಕಕ್ಕೆ ಹೋದ ಪರಿಣಾಮ ಮಚ್ಚಿನಿಂದ ಹೊಡೆದು ಪತ್ನಿಯನ್ನು ಫ್ರಭು ಕೊಲೆ ಮಾಡಿದ್ದಾನೆ.
ಬಳಿಕ ತಾನೂ ಮನೆಯ ಮುಂದೆ ನೇಣಿಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಎಸ್ಪಿ ಶಿವಕುಮಾರ್ ಗುಣಾರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.