ಮನೆ ಯೋಗಾಸನ ಆಕರ್ಣ ಧನುರಾಸನ

ಆಕರ್ಣ ಧನುರಾಸನ

0

ಆಕರ್ಣ ಧನುರಾಸನದ ಪೂರ್ಣಸ್ಥಿತಿಯಲ್ಲಿ ಶರೀರದ ಆಕೃತಿಯು ಕಿವಿಯ ವರೆಗೆ ಎ(ಹೆ)ದೆಯನ್ನೇರಿಸಿದ ಧನುಸ್ಸಿನಂತೆ ಕಂಡುಬರುವುದು. ಆದ್ದರಿಂದಲೇ ಆಕರ್ಣ ಧನುರಾಸನವೆಂಬ ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ.

Join Our Whatsapp Group

ಮಾಡುವ ಕ್ರಮ

1)    ಯೋಗಾಭ್ಯಾಸಿಯು ಪ್ರಾರಂಭದಲ್ಲಿ ತನ್ನ ಎರಡೂ ಕಾಲುಗಳನ್ನು ನೆಲದ ಮೇಲೆ ಮುಂದಕ್ಕೆ ಚಾಚಿ, ಎದೆ ಎತ್ತಿ ನೇರವಾಗಿ ಕುಳಿತುಕೊಳ್ಳಬೇಕು.

2)   ಅನಂತರ ಎಡಗೈಯಿಂದ ಚಾಚಿರುವ ಬಲಗಾಲಿನ ಹೆಬ್ಬೆರಳನ್ನು ಭದ್ರವಾಗಿ ಹಿಡಿದುಕೊಳ್ಳಬೇಕು (ಆದರೆ ಬಲಗಾಲನ್ನು ಬಗ್ಗಿಸಬಾರದು)

3)  ಎಡಗಾಲನ್ನು ಮಂಡಿಯ ಬಳಿ ಬಗ್ಗಿಸಿ, ಎಡಗಾಲಿನ ಪಾದವನ್ನು ಬಲಗೈಯಿಂದ ಹಿಡಿದು ಕಿವಿಯವರೆಗೂ ಒಯ್ಯಬೇಕು. (ಈ ಸ್ಥಿತಿಯಲ್ಲಿ ಎಡಗಾಲು ಚಿತ್ರದಲ್ಲಿರುವಂತೆ ಬಲಗಾಲು ಮತ್ತು ಎಡಗೈ ನಡುವಿನಲ್ಲಿ ಇರಬೇಕು.) ಅನಂತರ ಬೆನ್ನನ್ನು ಸಾಧ್ಯವಾದಷ್ಟೂ ನೇರಮಾಡಿ ಅರ್ಧ ನಿಮಿಷದವರೆಗೆ ಇದೇ ಸ್ಥಿತಿಯಲ್ಲಿದ್ದು ಅನಂತರ ಇನ್ನೊಂದು ಕಾಲಿನಿಂದಲೂ ಇದೇ ಕ್ರಿಯೆಯನ್ನು ಮಾಡಬೇಕು. ಈ ಆಸನದ ಅಭ್ಯಾಸದಲ್ಲಿ ಅನೇಕ ರೀತಿಯ ವ್ಯತ್ಯಾಸಗಳೂ ಇವೆ.

ಲಾಭಗಳು:

ಬೆನ್ನು ಮತ್ತು ಎದೆಯೊಳಗಿನ ಅನೇಕ ದೋಷಗಳು ದೂರವಾಗುವವು. ಉದರಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳು ನಿವಾರಣೆಯಾಗುವುವು. ಕಾಲುಗಳ ಮಂಡಿ ಮತ್ತು ಕೀಲುಗಳಲ್ಲಿನ ಗಡಸುತನ ನಿವಾರಣೆಯಾಗುವುದು. ವಿಶೇಷವಾಗಿ ಈ ಆಸನವು ಮಲವಿಸರ್ಜನೆಗೆ ಉಪಕಾರಿ.