ಮನೆ ಸುದ್ದಿ ಜಾಲ ಏರ್ ಟೆಲ್ ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವ ಗೂಗಲ್

ಏರ್ ಟೆಲ್ ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವ ಗೂಗಲ್

0

ನವದೆಹಲಿ: ಭಾರತದ ಪ್ರಮುಖ ದೂರ ಸಂಪರ್ಕ ಸೇವಾದಾರ ಕಂಪನಿ ಭಾರ್ತಿ ಏರ್ ಟೆಲ್ ನಲ್ಲಿ ಒಂದು ಬಿಲಿಯನ್ ಡಾಲರ್ ಹೂಡಿಕೆಗೆ ಜಾಗತಿಕ ಟೆಕ್ ಕಂಪನಿ ಗೂಗಲ್ ಮುಂದಾಗಿದೆ.

ಈ ಎರಡು ಕಂಪನಿಗಳ ನಡುವೆ ಮುಂದಿನ ಐದು ವರ್ಷಗಳ ಅವಧಿಗೆ ವಾಣಿಜ್ಯ ಒಪ್ಪಂದವೇರ್ಪಟ್ಟಿದೆ.

 ಭಾರತದಲ್ಲಿ ಡಿಜಿಟಲ್ ಪರಿಸರ ವ್ಯವಸ್ಥೆಯ ಭಾಗವಾಗಿ ಏರ್ ಟೆಲ್ ನ ಪ್ರತಿ ಷೇರಿಗೆ ರೂ. 734 ಮೊತ್ತದಲ್ಲಿ 700 ಮಿಲಿಯನ್ ಡಾಲರ್ ನ್ನು ಗೂಗಲ್ ಕಂಪನಿ ಹೂಡಿಕೆ ಮಾಡಲಿದೆ ಏರ್ ಟೆಲ್ ಕಂಪನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರೊಂದಿಗೆ ಇತರೆ ವಾಣಿಜ್ಯ ಒಪ್ಪಂದಗಳಲ್ಲಿ ಸುಮಾರು 300 ಮಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತಿದೆ. ಭಾರತದಲ್ಲಿ ಡಿಜಿಟಲ್ ಪರಿಸರ ವ್ಯವಸ್ಥೆ ವೃದ್ಧಿ ಗುರಿಯೊಂದಿಗೆ ಗೂಗಲ್ ಕಂಪನಿಯೊಂದಿಗೆ ಈ ಒಪ್ಪಂದ ಮಾಡಿಕೊಂಡಿರುವುದಾಗಿ ಏರ್ ಟೆಲ್ ಕಂಪನಿ ಮಾಹಿತಿ ನೀಡಿದೆ.

ಹಿಂದಿನ ಲೇಖನಕೊರೋನಾ: ದೇಶದಲ್ಲಿಂದು 2.51 ಲಕ್ಷ ಹೊಸ ಕೇಸ್ ಪತ್ತೆ
ಮುಂದಿನ ಲೇಖನಫೆ.25ಕ್ಕೆ ‘ಗಂಗೂಬಾಯಿ ಕಾಠಿಯಾವಾಡಿ’ ತೆರೆಗೆ