ಮನೆ ಆರೋಗ್ಯ ಹೊಟ್ಟೆಯ ಆರೋಗ್ಯ ಚೆನ್ನಾಗಿರಲು ಬೇಕಿರುವ ಒಳ್ಳೆಯ ಬ್ಯಾಕ್ಟೀರಿಯಾಗಾಗಿ ಏನನ್ನು ಸೇವಿಸಬೇಕು ?

ಹೊಟ್ಟೆಯ ಆರೋಗ್ಯ ಚೆನ್ನಾಗಿರಲು ಬೇಕಿರುವ ಒಳ್ಳೆಯ ಬ್ಯಾಕ್ಟೀರಿಯಾಗಾಗಿ ಏನನ್ನು ಸೇವಿಸಬೇಕು ?

0

ಪದೇ ಪದೇ ಹೊಟ್ಟೆ ಸಮಸ್ಯೆಯಿಂದ ಬಳಲುವವರು ಕೆಲವೊಂದು ಆಹಾರಗಳ ಮೂಲಕ ಪರಿಸ್ಥಿತಿಯನ್ನು ಸುಧಾರಿಸಬೇಕಾಗುತ್ತದೆ. ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯ ಆಹಾರವೇ ಮದ್ದು ಎನ್ನಬಹುದು. ಹಾಗಾದರೆ ಒಳ್ಳೆಯ ಬ್ಯಾಕ್ಟೀರಿಯಾವನ್ನು ನೀಡುವ ಆಹಾರಗಳ ಬಗ್ಗೆ ಇಲ್ಲಿ ತಿಳಿಯೋಣ.

Join Our Whatsapp Group

ಹೊಟ್ಟೆಯ ಆರೋಗ್ಯಕ್ಕಾಗಿ ಸಮತೋಲನ ಆಹಾರ ತಿನ್ನುವುದು ಮುಖ್ಉ. ನಾವು ವಿವಿಧ ಸೂಕ್ಷ್ಮಾಣುಜೀವಿಗಳನ್ನು ಹೊಂದಿರುವ ಆಹಾರವನ್ನು ಸೇವಿಸಿದಾಗ ಅವು ನಮ್ಮ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ.

ಹಣ್ಣು-ತರಕಾರಿ: ಆಹಾರದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವುದು ಮುಖ್ಯ. ಅವುಗಳಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.

ಹುದುಗಿಸಿದ ಆಹಾರ: ದೋಸೆ-ಇಡ್ಲಿ ಹಿಟ್ಟು ಇದಕ್ಕೆ ಉತ್ತಮ ಉದಾಹರಣೆ. ಇದು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ನೀವು ಆಹಾರದಲ್ಲಿ ಮೊಸರು, ಉಪ್ಪಿನಕಾಯಿಗಳು, ಇಡ್ಲಿ ಇತ್ಯಾದಿಗಳನ್ನು ಸೇವಿಸಬಹುದು. ನಿಮ್ಮ ಕರುಳಿನ ಆರೋಗ್ಯಕ್ಕೆ ಪ್ರೋಬಯಾಟಿಕ್ ಬಹಳ ಮುಖ್ಯ.

ಪ್ರಿಬಯಾಟಿಕ್ ಆಹಾರ: ಇವು ವಿಶೇಷ ರೀತಿಯ ಫೈಬರ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ ಗಳಾಗಿವೆ. ಇದಕ್ಕಾಗಿ ಬೆಳ್ಳುಳ್ಳಿ, ಹಸಿ ಈರುಳ್ಳಿ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ಸಸ್ಯಾಹಾರಿ ಆಹಾರಗಳು: ಇದು ಮೈಕ್ರೋಬಯೋಮ್ ಅನ್ನು ಸುಧಾರಿಸುತ್ತದೆ. ಹೊಟ್ಟೆಯ ಹುಣ್ಣುಗಳಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಆರೋಗ್ಯಕರವಾಗಿಸಲು ಕೆಲಸ ಮಾಡುತ್ತದೆ.

ಧಾನ್ಯಗಳು: ಇದು ಕರುಳಿನ ಸೂಕ್ಷ್ಮಜೀವಿಯೊಳಗೆ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದಕ್ಕಾಗಿ, ನೀವು ಹೆಚ್ಚು ಗೋಧಿ, ಬಾರ್ಲಿ, ಧಾನ್ಯಗಳು ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.