ಮನೆ ರಾಜಕೀಯ ಕಾಂಗ್ರೆಸ್ ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರಮೇಶ್ ಜಾರಕಿಹೊಳಿ

ಕಾಂಗ್ರೆಸ್ ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರಮೇಶ್ ಜಾರಕಿಹೊಳಿ

0

ಬೆಂಗಳೂರು: ನನ್ನ ಜೊತೆ 16 ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ. ಜಿಲ್ಲಾವಾರು ಲಿಸ್ಟ್ ಹೇಳ್ತೀನಿ, ನನ್ನ ಸಂಪರ್ಕದಲ್ಲಿರುವ ಶಾಸಕರ ಕುರಿತು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಜತೆ 36 ಜನ ಇದ್ರು, 17 ಜನ ನನ್ನ ಜತೆ ಬಂದ್ರು. ಇನ್ನೂ ಕೆಲವರು ಆ ಸಂದರ್ಭದಲ್ಲಿ ನಮ್ಮ ಜತೆ ಬರಲಿಲ್ಲ. ತಾಂತ್ರಿಕ ಕಾರಣದಿಂದ ಅಲ್ಲಿಯೇ ಇದ್ದಾರೆ ಇವಾಗ 16 ಜನ ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡೊಲ್ಲ. ಅಮಿತ್ ಷಾ ನಮ್ಮ ಹೈಕಮಾಂಡ್. ನಾನು ಇಲ್ಲೆ ಇದ್ದು ಪಕ್ಷ ಸಂಘಟನೆ ಮಾಡ್ತೀನಿ, ನಾನು ಬಿಜೆಪಿ ಬಿಡೊಲ್ಲ.ಚುನಾವಣೆ ಹತ್ತಿರ ಬಂದಾಗ ಗೊತ್ತಾಗುತ್ತೆ ಎಂದರು.

ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಸಿಎಂ, ವರಿಷ್ಠರು ತೆಗೆದುಕೊಳ್ಳೋ ನಿರ್ಧಾರಕ್ಕೆ ಬದ್ದ. ನನಗೇನು ಈಗ ಮಂತ್ರಿ ಸ್ಥಾನ ಬೇಡ ಎಂದು ಹೇಳಿದರು.

ಹಿಂದಿನ ಲೇಖನನಾರಾಯಣ ಗುರು ಸ್ತಬ್ಧಚಿತ್ರ ವಿವಾದ; ನಾಳೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಮುಂದಿನ ಲೇಖನರಾಜ್ಯದ 19 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ; ಇಲ್ಲಿದೆ ಮಾಹಿತಿ