ಮನೆ ಕ್ರೀಡೆ ಐಪಿಎಲ್: ರಾಯಲ್ಸ್ ಗಳ ನಡುವಿನ ಕದನ ಇಂದು

ಐಪಿಎಲ್: ರಾಯಲ್ಸ್ ಗಳ ನಡುವಿನ ಕದನ ಇಂದು

0

ಮುಂಬೈ(Mumbai): ಸಂಜು ಸ್ಯಾಮ್ಸನ್(Sanju Samson) ನಾಯಕತ್ವದ ರಾಜಸ್ಥಾನ(Rajashan) ತಂಡವು ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದಿದೆ. ಬ್ಯಾಟರ್ ಜಾಸ್ ಬಟ್ಲರ್ ಈ ಸಲ ಶತಕ ಬಾರಿಸಿದ ಮೊದಲಿಗರಾಗಿದ್ದಾರೆ.

ನಾಯಕ ಸಂಜು, ಶಿಮ್ರಾನ್ ಹೆಟ್ಮೆಯರ್ ಅವರು ಉತ್ತಮ ಲಯದಲ್ಲಿದ್ದಾರೆ. ನವದೀಪ್ ಸೈನಿ, ಚಾಹಲ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಇರುವ ಬೌಲಿಂಗ್ ಪಡೆಯು ಎದುರಾಳಿಗಳಿಗೆ ಸವಾಲೊಡ್ಡಲು ಸಿದ್ಧವಾಗಿದೆ.

ಆರ್‌ಸಿಬಿ(RCB)ಯು ಎರಡು ಪಂದ್ಯಗಳಲ್ಲಿ ಆಡಿದ್ದು ಒಂದು ಸೋತು ಮತ್ತೊಂದರಲ್ಲಿ ಗೆದ್ದಿದೆ. ಆದರೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಫಫ್, ವಿರಾಟ್ ಕೊಹ್ಲಿ, ಅನುಜ್ ರಾವತ್ ಎರಡನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ಅನುಭವಿ ದಿನೇಶ್ ಕಾರ್ತಿಕ್ ‘ಫಿನಿಷರ್’ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.

ಮೊದಲ ಪಂದ್ಯದಲ್ಲಿ ಇನ್ನೂರಕ್ಕೂ ಹೆಚ್ಚು ರನ್‌ಗಳ ಮೊತ್ತವನ್ನು ಪೇರಿಸಿಯೂ ಸೋತಿದ್ದ ತಂಡವು, ಎರಡನೇ ಪಂದ್ಯದಲ್ಲಿ 128 ರನ್‌ಗಳ ಗುರಿ ಸಾಧಿಸಲು ಕಷ್ಟಪಟ್ಟಿತ್ತು. 19.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆದ್ದು ನಿಟ್ಟುಸಿರುಬಿಟ್ಟಿತ್ತು. ಆದರೆ ಆ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಲಯ ಕಂಡುಕೊಂಡಿದ್ದರು.

ಶ್ರೀಲಂಕಾದ ವಣಿಂದು ಹಸರಂಗಾ, ಆಕಾಶ್ ದೀಪ್ ಮತ್ತು ಹರ್ಷಲ್ ಪಟೇಲ್ ಕೋಲ್ಕತ್ತ ಬ್ಯಾಟರ್‌ಗಳನ್ನು ಕಾಡಿದ್ದರು. ಇದೀಗ ಅವರ ಮುಂದೆ ರಾಜಸ್ಥಾನದ ಬಲಿಷ್ಠ ಬ್ಯಾಟಿಂಗ್ ಪಡೆಯ ಸವಾಲು ಇದೆ.