ಮನೆ ಸುದ್ದಿ ಜಾಲ ಮೌಂಟ್ ಎವರೆಸ್ಟ್ನ 360 ಡಿಗ್ರಿ ದೃಶ್ಯ ಹಂಚಿಕೊಂಡ ಆನಂದ್ ಮಹೀಂದ್ರಾ

ಮೌಂಟ್ ಎವರೆಸ್ಟ್ನ 360 ಡಿಗ್ರಿ ದೃಶ್ಯ ಹಂಚಿಕೊಂಡ ಆನಂದ್ ಮಹೀಂದ್ರಾ

0

ನವದೆಹಲಿ: ಮೌಂಟ್‌ ಎವರೆಸ್ಟ್‌ ಶಿಖರದ ಮೇಲಿಂದ 360 ಡಿಗ್ರಿ ದೃಶ್ಯದ ವಿಡಿಯೋವನ್ನು ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟ. ಕೆಲವೊಮ್ಮೆ ನೀವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಸನ್ನಿವೇಶ ಬಂದಾಗ ಪ್ರಪಂಚದ ಅಡೆತಡೆಯಿಲ್ಲದ ನೋಟದೊಂದಿಗೆ ನೀವು ಎವರೆಸ್ಟ್‌ ಶಿಖರದ ಮೇಲಿರುವಿರಿ ಎಂದು ಊಹಿಸಲು ಸಹಾಯ ಮಾಡುತ್ತದೆ. ‘ದೊಡ್ಡ ಚಿತ್ರ’ ನೋಡಲು ಸುಲಭವಾಗುತ್ತದೆ ಎಂದು ಆನಂದ್ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಅದ್ಭುತ ಎಂದು ಪ್ರತಿಕ್ರಿಯಿಸಿದ್ದಾರೆ.