ಮನೆ ರಾಜ್ಯ ಪ.ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಳ ಮಸೂದೆಗೆ ಒಪ್ಪಿಗೆ

ಪ.ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಳ ಮಸೂದೆಗೆ ಒಪ್ಪಿಗೆ

0

ಬೆಳಗಾವಿ(Belagavi): ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಒಟ್ಟಾರೆ ಶೇ 6 ರಷ್ಟು ಹೆಚ್ಚಿಸುವ ಮಸೂದೆಗೆ ವಿಧಾನಸಭೆ ಸೋಮವಾರ ಸರ್ವಾನುಮತದ ಒಪ್ಪಿಗೆ ನೀಡಿದೆ.

ಇದರಿಂದ ಪರಿಶಿಷ್ಟ ಜಾತಿ ಮೀಸಲು ಪ್ರಮಾಣ ಶೇ 17 ಕ್ಕೂ, ಪರಿಶಿಷ್ಟ ಪಂಗಡಗಳ ಮೀಸಲಾತಿ ಶೇ 7 ಕ್ಕೆ ಹೆಚ್ಚಲಿದೆ.

ಈ ಹಿಂದೆ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಇದೀಗ ಮಸೂದೆಯನ್ನು ಮಂಡಿಸಿ ಅದಕ್ಕೆ ಒಪ್ಪಿಗೆ ಪಡೆಯಲಾಯಿತು.

ಪರಿಷತ್ತಿನಲ್ಲಿ ಅಂಗೀಕಾರವಾದರೆ ಮೀಸಲಾತಿ ಪ್ರಮಾಣ ಶೇ 24 ರಷ್ಟು ಹೆಚ್ಚಿಸುವ ಅವಕಾಶದ ಮೊದಲ ಹೆಜ್ಜೆ ಪೂರ್ಣಗೊಳ್ಳಲಿದೆ. ಮೀಸಲಾತಿ ಹೆಚ್ಚಳದ ಕುರಿತು ನಿಯಮ 69 ರ ಮೇಲಿನ ಚರ್ಚೆಯ ಬಳಿಕ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಈ ಮಸೂದೆಯನ್ನು ಮಂಡಿಸಿದರು.

ಈ ಮಸೂದೆಯನ್ನು ತುಂಬು ಹೃದಯದಿಂದ ಬೆಂಬಲಿಸುತ್ತೇವೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಹಿಂದಿನ ಲೇಖನಫಾರ್ಮಾ ಲ್ಯಾಬ್ ಕಂಪನಿಯಲ್ಲಿ ಅಗ್ನಿ ಅವಘಡ: ನಾಲ್ವರು ಕಾರ್ಮಿಕರು ಸಜೀವ ದಹನ
ಮುಂದಿನ ಲೇಖನಮಗಳ ಅಶ್ಲೀಲ ವಿಡಿಯೋ ಶೇರ್ ಮಾಡಿದ್ದನ್ನು ಪ್ರಶ್ನಿಸಿದ ಯೋಧನನ್ನು  ಥಳಿಸಿ ಹತ್ಯೆ: ಆರೋಪಿಗಳ ಬಂಧನ