ಮನೆ ಅಪರಾಧ ಡಬಲ್ ಡೆಕ್ಕರ್ ಬಸ್ ಪಲ್ಟಿ: ಮೂವರ ಸಾವು, 30 ಜನರಿಗೆ ಗಾಯ

ಡಬಲ್ ಡೆಕ್ಕರ್ ಬಸ್ ಪಲ್ಟಿ: ಮೂವರ ಸಾವು, 30 ಜನರಿಗೆ ಗಾಯ

0

ಅಯೋಧ್ಯೆ(Ayodye): ಡಬಲ್‌ ಡೆಕ್ಕರ್ ಬಸ್(Double deckar bus) ಪಲ್ಟಿಯಾಗಿ ಮೂವರು ಮೃತ(death) ಪಟ್ಟು, 30 ಜನರು ಗಾಯಗೊಂಡಿರುವ ಘಟನೆ ಲಖನೌ-ಗೋರಖ್‌ಪುರ ರಾಷ್ಟ್ರೀಯ ಹೆದ್ದಾರಿ(National Highway)ಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೆಹಲಿ(Delhi)ಯಿಂದ ಬರುತ್ತಿದ್ದ ಖಾಸಗಿ ಬಸ್, ಮುಮ್ತಾಜ್ ನಗರ ಪ್ರದೇಶದ ಹೆದ್ದಾರಿಯಲ್ಲಿ ಓವರ್ ಟೇಕ್ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಮುಂಜಾನೆ 7 ಗಂಟೆ ಸುಮಾರಿಗೆ ಪಲ್ಟಿ ಹೊಡೆದಿದೆ ಎಂದು ತಿಳಿಸಿದ್ದಾರೆ.

ಎಲ್ಲ ಗಾಯಾಳುಗಳನ್ನು ಫೈಜಾಬಾದ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ 12 ಜನರನ್ನು ದಾಖಲಿಸಲಾಗಿದ್ದು, ಇನ್ನುಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಮರಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರಲ್ಲಿ ಒಬ್ಬರನ್ನು ಸಿದ್ಧಾರ್ಥನಗರದ ರಮೇಶ್ (35) ಎಂದು ಗುರುತಿಸಲಾಗಿದ್ದು, ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ. ಅವರ ಗುರುತು ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಕಂಟೋನ್‌ಮೆಂಟ್ ಪೊಲೀಸ್ ಠಾಣೆಯ ಎಸ್ಎಚ್ಒ ಅರುಣ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಉತ್ತರ ಪ್ರದೇಶ(uttar Pradesh)ದ ಮುಖ್ಯಮಂತ್ರಿ(Chief Minister) ಯೋಗಿ ಆದಿತ್ಯನಾಥ್(Yogi Adithyanath), ಅಗತ್ಯ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಆದೇಶಿಸಿದ್ದಾರೆ.