ಮನೆ ಅಪರಾಧ ಆಟೋ ನಿಲ್ಲಿಸದೇ ಸಬ್‌ಇನ್ಸ್​ಪೆಕ್ಟರ್​ಗೆ ಡಿಕ್ಕಿ ಹೊಡೆದ ಚಾಲಕ

ಆಟೋ ನಿಲ್ಲಿಸದೇ ಸಬ್‌ಇನ್ಸ್​ಪೆಕ್ಟರ್​ಗೆ ಡಿಕ್ಕಿ ಹೊಡೆದ ಚಾಲಕ

0

ಚೆನ್ನೈ(Chennai): ನಂದಂಬಾಕ್ಕಂ  ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಬ್​ ಇನ್ಸ್​ಪೆಕ್ಟರ್​ಗೆ(Sub inspector) ಆಟೋ(Auto) ಗುದ್ದಿಸಿ ಚಾಲಕ ಪರಾರಿಯಾಗಿದ್ದು, ಸಬ್​ ಇನ್ಸ್​ಪೆಕ್ಟರ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸಮೀಪದ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದೆ.

ಸಬ್​ ಇನ್ಸ್​ಪೆಕ್ಟರ್​ ಬೋನ್​ರಾಜ್ ನಂದಂಬಾಕ್ಕಂ ಪೊಲೀಸ್​ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್​ 3 ರಂದು ರಾತ್ರಿ ನಂದಂಬಾಕ್ಕಂ ರಸ್ತೆಯಲ್ಲಿ ಸಿಬ್ಬಂದಿ ಜೊತೆ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬರುತ್ತಿದ್ದ ಆಟೋ ರಿಕ್ಷಾ ನಿಲ್ಲಿಸುವಂತೆ ಬೋನ್‌ರಾಜ್‌ ಚಾಲಕನಿಗೆ ಸೂಚಿಸಿದ್ದಾರೆ. ಆದ್ರೆ ಚಾಲಕ ವಾಹನವನ್ನು ನಿಲ್ಲಿಸದೇ ಸಬ್‌ ಇನ್ಸ್‌ಪೆಕ್ಟರ್‌ ಮೇಲೆ ಗುದ್ದಿಸಿ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ..

ಹಿಂದಿನ ಲೇಖನಡಬಲ್ ಡೆಕ್ಕರ್ ಬಸ್ ಪಲ್ಟಿ: ಮೂವರ ಸಾವು, 30 ಜನರಿಗೆ ಗಾಯ
ಮುಂದಿನ ಲೇಖನಇಪ್ಪತ್ತಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳಿಂದ ಹೆಚ್.ಡಿ.ಕುಮಾರಸ್ವಾಮಿ ಭೇಟಿ