ಮನೆ ಕಾನೂನು ಮಂಡ್ಯ: ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆ

ಮಂಡ್ಯ: ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆ

0

ಮಂಡ್ಯ:- 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಆರೋಪಿ-1 ರವರು ಲೈಂಗಿಕ ಶೋಷಣೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಕೊಟ್ಟಿ ಕಿರುಕುಳದಿಂದ ಮೃತ ನೊಂದ ಬಾಲಕಿ ಮನನೊಂದು ಮೃತಪಟ್ಟಿರುವುದಾಗಿ ಕಲಂ:306,504,324,354-ಬಿ ಹಾಗೂ ಪೋಕ್ಸೋ ಕಾಯಿದೆ ಕಲಂ-12 ಹಾಗೂ ಜೆ.ಜೆ.ಕಾಯಿದೆ ಕಲಂ.82(3) ರ ಅಡಿ, ಅಂದಿನ ಕೆ.ಆರ್.ಪೇಟೆ ಟೌನ್ ಪೋಲೀಸ್ ಠಾಣಾ ಡಿ.ವೈ.ಎಸ್.ಪಿ ವಿಶ್ವನಾಥ್.ಕೆ.ಬಿ. ರವರು ದೋಷರೋಪಣಾ ಪತ್ರವನ್ನು ದಾಖಲಿಸಲಾಗಿತ್ತು.

Join Our Whatsapp Group


ಈ ಪ್ರಕರಣವು ಸ್ಪೆಷಲ್ ಕೇಸ್ ಸಂ:80/2019 (ಕೆ.ಆರ್.ಪೇಟೆ ಟೌನ್ ಪೋಲೀಸ್ ಠಾಣಾ ಮೊ.ಸಂ: 32 ( 2018 ) ರಂತೆ ಮಂಡ್ಯದ ಮಾನ್ಯ ಎಫ್.ಟಿ.ಎಸ್.ಸಿ-1(ಪೋಕ್ಸ್ ವಿಶೇಷ) ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶರಾದ ಮಾನ್ಯ ಶಬಾನಾ ಬೇಗಂ ಲಾಡ್‍ಖಾನ್‍ರವರ ಮುಂದೆ ವಿಚಾರಣೆ ನಡೆದು ಆರೋಪಿ-1 ರವಿ ಇವರಿಗೆ ಕಲಂ:305 ಐ.ಪಿ.ಸಿ ಕಾಯಿದೆ ಅಪರಾಧಕ್ಕೆ ಅಪರಾಧಿ ಎಂದು ತೀರ್ಪು ನೀಡಿದ್ದು, ಕಲಂ:305 ಐ.ಪಿ.ಸಿ ಗೆ 2 ವರ್ಷಗಳ ಸಾದಾ ಸಜೆ ಮತ್ತು ರೂ. 50,000/- ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಹಾಗೂ ಮೃತ ನೊಂದ ಬಾಲಕಿ ತಾಯಿಗೆ ರೂ.2,00,000/- ಗಳನ್ನು ಪರಿಹಾರವಾಗಿ ಆದೇಶಿಸಿರುತ್ತದೆ.
ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಜೆ.ಪೂರ್ಣಿಮಾ ರವರು ವಾದ ಮಂಡಿಸಿದ್ದರು.