ಮನೆ ಅಪರಾಧ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಆರೋಪಿ ಬಂಧನ

8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಆರೋಪಿ ಬಂಧನ

0

ಉತ್ತರಪ್ರದೇಶ(Uttarpradesh): ಚಾಕೋಲೆಟ್ ಆಸೆ ತೋರಿಸಿ 8 ವರ್ಷದ ಬಾಲಕಿಯ ಮೇಲೆ ಪಕ್ಕದ ಮನೆಯವನೇ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಅಜಂಗಢದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕೊಲೆ ಮಾಡಿರುವ ದುರ್ಘಟನೆ ಸ್ಥಳದಲ್ಲಿಯೇ ಸಾಕ್ಷಿ ಲಭಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ

ಅಪ್ರಾಪ್ತ ಬಾಲಕಿ ಮನೆಯಿಂದ 100 ಮೀಟರ್‌ ದೂರದಲ್ಲಿರುವ ಪಕ್ಕದ ಮನೆಯವನೇ ಅತ್ಯಾಚಾರ ಮಾಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಸಾಕ್ಷ್ಯ ದೊರೆತಿದ್ದು,  ಆರೋಪಿ ಲಕ್ಷ್ಮಣ ಎಂಬಾತನನ್ನು ಬಂಧಿಸಲಾಗಿದೆ.

ಬಾಲಕಿಯನ್ನು ಚಾಕೋಲೆಟ್‌ ಕೊಡುವ ನೆಪದಲ್ಲಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಅತ್ಯಾಚಾರ ಎಸಗಿದ ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಎಸ್‌ಪಿ ಅನುರಾಗ್‌ ಆರ್ಯ ಹೇಳಿದ್ದಾರೆ.

ಆರೋಪಿ ಲಕ್ಷ್ಮಣ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದು, ಡ್ರಗ್‌ ಸೇವಿಸುತ್ತಿದ್ದ. ಬಾಲಕಿ ಮನೆಗೆ ಬಾರದಿರುವುದನ್ನು ಗಮನಿಸಿದ ಪಾಲಕರು ಹುಡಕಲು ಆರಂಭಿಸಿದ್ದಾರೆ. ಆಗ ಅಜ್ಞಾತ ಸ್ಥಳದಲ್ಲಿ ಮೃತದೇಹ ಪತ್ತೆಯಾಗಿದೆ.ತ

ಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಮಾಜಿ ಸಚಿವೆ ರಾಣಿ ಸತೀಶ್- ಮಹಡಿ ಶಿವಮೂರ್ತಿ ಫೋನ್ ಸಂಭಾಷಣೆ ವೈರಲ್
ಮುಂದಿನ ಲೇಖನಸರ್ಕಾರ  ರಸ್ತೆಗುಂಡಿಗಳ ಶೃಂಗ ನಡೆಸಿದರೆ ಚೆನ್ನಾಗಿರುತ್ತದೆ: ಹೆಚ್’ಡಿಕೆ