ಮನೆ ರಾಜಕೀಯ ಗೃಹ ಜ್ಯೋತಿ ಅರ್ಜಿ ಸರ್ವರ್ ಹ್ಯಾಕ್: ಸತೀಶ್ ಜಾರಕಿಹೊಳಿಯದ್ದು ನೀತಿಗೆಟ್ಟ ಹೇಳಿಕೆ ಎಂದ ಕೆ.ಎಸ್. ಈಶ್ವರಪ್ಪ

ಗೃಹ ಜ್ಯೋತಿ ಅರ್ಜಿ ಸರ್ವರ್ ಹ್ಯಾಕ್: ಸತೀಶ್ ಜಾರಕಿಹೊಳಿಯದ್ದು ನೀತಿಗೆಟ್ಟ ಹೇಳಿಕೆ ಎಂದ ಕೆ.ಎಸ್. ಈಶ್ವರಪ್ಪ

0

ಕೊಪ್ಪಳ: ಗೃಹ ಜ್ಯೋತಿ ಅರ್ಜಿ ಸರ್ವರ್ ಹ್ಯಾಕ್ ಆಗಿದೆ ಎಂದು ಮಂತ್ರಿ ಸತೀಶ ಜಾರಕಿಹೊಳಿ ಅವರು ಹೇಳಿಕೆ ನೀಡಿ, ಈಗ ಅದು ರಾಜಕೀಯ ಹೇಳಿಕೆ ಎಂದೆನ್ನುತ್ತಿದ್ದಾರೆ ಇವರದ್ದು ನೀತಿಗೆಟ್ಟವರ ಹೇಳಿಕೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸರ್ಕಾರದ ವಿರುದ್ದ ಗುಡುಗಿದರು.

Join Our Whatsapp Group

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಅವರು ಅಕ್ಕಿ ನೀಡುವಲ್ಲಿ ಟೀಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಬಿಜೆಪಿ ಮೇಲೆ ಆರೋಪ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಚುನಾವಣೆ ಕೆಟ್ಟ ಕನಸು ಎಂದು ತಿಳಿದು ಲೋಕಸಭೆಯಲ್ಲಿ ಮೋದಿ ಗೆಲ್ಲಿಸಲೇಬೇಕು. ಬಿಜೆಪಿ ಸಂಘಟನಾ ಶಕ್ತಿ ಕುಂದಿಲ್ಲ. ಕೇಂದ್ರ ಸರಕಾರ ಸಾಧನೆ, ಇಡೀ ದೇಶ ಮೆಚ್ಚಿ ಪ್ರಶಂಸೆ ಮಾಡುತ್ತಿದೆ. ಖಂಡಿತವಾಗಿ ಅತೀ ಹೆಚ್ಚು ಸ್ಥಾನಗಳನ್ನು ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಲಿದೆ. ಚುನಾವಣೆಯಲ್ಲಿ ಸೋತಿದ್ದು ಮರೆತು ಮೋದಿ ಗೆಲ್ಲಿಸಲಿದ್ದಾರೆ ಎಂದರು.

ಹೊಂದಾಣಿಕೆ ರಾಜಕಾರಣದ ವಿಷಯದಲ್ಲಿ ಪ್ರತಿಪಕ್ಷಗಳು ಒಂದೇ ಕಡೆ ಒಂದಾಗುತ್ತಿವೆ. ಪಾಂಡವರು ಐದೇ ಜನ. ಪ್ರತಿಪಕ್ಷಗಳು ಮೊದಲೂ ಆರೋಪ ಮಾಡಿದ್ದಾರೆ. ಅವೆಲ್ಲ ವಿಫಲ ಆಗಿವೆ. ಇದು ಹೊಸದಲ್ಲ ಎಂದರು.

ಚುನಾವಣೆ ಕೆಟ್ಟ ಕನಸು, ಅದನ್ನು ಮರೆತು ಹೋಗಬೇಕು. ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ಹೈಕಮಾಂಡ ನಿರ್ಧಾರ ಮಾಡಲಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್ ನೀಡದ ಕುರಿತು ಮಾಧ್ಯಮಗಳ ಸೃಷ್ಟಿಯಷ್ಟೆ. ಪಕ್ಷದಲ್ಲಿ ಈ ಕುರಿತು ಪಕ್ಷದಲ್ಲಿ ನಿರ್ಧಾರವಾಗಿಲ್ಲ ಎಂದರು.

ಗ್ಯಾರಂಟಿಗಳನ್ನು ಮೊದಲನೇ ಕ್ಯಾಬಿನೆಟ್ನಲ್ಲಿ ಜಾರಿಗೊಳಿಸಬೇಕು. ಅವರ ಹನಿಮೂನ್ ಅವಧಿ ಮುಗಿದಿದೆ. ರಾಜ್ಯದಲ್ಲಿ ಬರದಿಂದ ಜನ ಒದ್ದಾಡುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಸರಕಾರ ಕಾಳಜಿ ಇಲ್ಲ ಎಂದರು.

ಗ್ಯಾರಂಟಿ ಘೋಷಣೆ ಮಾಡುವಾಗ ಮೋದಿ ಕೇಳಿದ್ದರಾ ಎಂದರಲ್ಲದೆ ವಿದ್ಯುತ್ ದರ ಏರಿಕೆ ಮಾಡಿ ದುಡ್ಡು ಬೇಕೆಂದು ಕೇಳುತ್ತಿದ್ದಾರೆ ಎಂದರು.

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ. ಎಂಎಲ್ ಸಿ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಂಜುಳಾ ಕರಡಿ, ಅಪ್ಪಣ್ಣ ಪದಕಿ, ನವೀನ ಗುಳಗಣ್ಣನವರ ಇದ್ದರು.