ಮನೆ ಸುದ್ದಿ ಜಾಲ ಚಿತ್ರದುರ್ಗದಲ್ಲಿ ಎರಡು ಲಾರಿಗಳ ನಡುವೆ ಅಪಘಾತ: ಓರ್ವ ವ್ಯಕ್ತಿ, 9 ಜಾನುವಾರು ಸಾವು

ಚಿತ್ರದುರ್ಗದಲ್ಲಿ ಎರಡು ಲಾರಿಗಳ ನಡುವೆ ಅಪಘಾತ: ಓರ್ವ ವ್ಯಕ್ತಿ, 9 ಜಾನುವಾರು ಸಾವು

0

ಚಿತ್ರದುರ್ಗ: 2 ಲಾರಿಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ, 9 ಜಾನುವಾರುಗಳು ಸಾವಪ್ಪಿರುವಂತಹ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ ಆರ್​ ಹಳ್ಳಿ ಗೇಟ್ ಬಳಿ ಅಪಘಾತ ನಡೆದಿದೆ. 

Join Our Whatsapp Group

ಮಹರಾಷ್ಟ್ರದಿಂದ ಕೋಲಾರಕ್ಕೆ ಲಾರಿಯಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಮಹಾರಾಷ್ಟ್ರ ಮೂಲದ ಸಹ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಚಾಲಕನಿಗೆ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

10 ಜಾನುವಾರುಗಳ ಪೈಕಿ 9 ಸಾವಪ್ಪಿದ್ದು, ಗಾಯಗೊಂಡಿರುವ 1 ಜಾನುವಾರನ್ನು ಚಳ್ಳಕೆರೆ ಬಳಿಯ ಗೋಶಾಲೆಗೆ ಶಿಫ್ಟ್ ಮಾಡಲಾಗಿದೆ. ಹಿರಿಯೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.