ಮನೆ ತಂತ್ರಜ್ಞಾನ 9 ಲಕ್ಷ ಮನೆ ಸೇರಿ ಮೈಲುಗಲ್ಲು ನೆಟ್ಟ ಮಹೀಂದ್ರಾ ಸ್ಕಾರ್ಪಿಯೋ

9 ಲಕ್ಷ ಮನೆ ಸೇರಿ ಮೈಲುಗಲ್ಲು ನೆಟ್ಟ ಮಹೀಂದ್ರಾ ಸ್ಕಾರ್ಪಿಯೋ

0

ಭಾರತೀಯ ಎಸ್ಯುವಿ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಗೆ ತನ್ನದೇ ಆದ ಸ್ಥಾನವಿದೆ. ನಮ್ಮ ದೇಶದ ಹೆಮ್ಮೆಯ ವಾಹನ ತಯಾರಿಕಾ ಕಂಪನಿಯೂ ಹೌದು. ಪ್ರತಿ ವರ್ಷವೂ ಒಂದೊಂದು ಹೊಸ ಪ್ರಯತ್ನಗಳನ್ನು ಮಾಡುತ್ತಾ ಜನರ ಮನಸ್ಸಿನಲ್ಲಿ ನೆಲೆಯಾಗಿರುವ ಮಹೀಂದ್ರಾ ಕಂಪನಿ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ.

Join Our Whatsapp Group

ಮಹೀಂದ್ರಾ ಕಂಪನಿಯು ತನ್ನ ಸ್ಕಾರ್ಪಿಯೋ ಮಾಡೆಲ್ ಎಸ್ಯುವಿಯನ್ನು 900000 ಮನೆಗಳಿಗೆ ತಲುಪಿಸಿರುವ ಮೂಲಕ ಅಪರೂಪದ ಸಾಧನೆಯನ್ನು ಮಾಡಿದೆ. ಅಂದರೆ ಮಹೀಂದ್ರಾ ಕಂಪನಿಯು ಸ್ಕಾರ್ಪಿಯೋ (Mahindra Scorpio) ಎಸ್ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗಿನಿಂದ ಹಿಡಿದು ಇಲ್ಲಿಯವರೆಗೆ ಸುಮಾರು 9 ಲಕ್ಷ ಕಾರುಗಳನ್ನು ಮಾರಾಟ ಮಾಡುವುದರ ಮೂಲಕ ಹೊಸ ಮೈಲುಗಲ್ಲು ಸೃಷ್ಟಿಸಿದೆ.

ಮಹೀಂದ್ರಾ ಕಂಪನಿಯು ಈ ಪ್ರಸಿದ್ದ ಸ್ಕಾರ್ಪಿಯೋವನ್ನು ಮೊದಲ ಬಾರಿಗೆ 2002 ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಕಾರು ಮಾರುಕಟ್ಟೆಗೆ ಬಂದ ಆ ಕಾಲದಿಂದ ಇಲ್ಲಿಯವರೆಗೆ ಜನಮಾನಸದಲ್ಲಿ ಭಾರೀ ಹೆಸರನ್ನು ಮಾಡಿದೆ. ಇನ್ನು ಕಂಪನಿಯು 2022 ರಲ್ಲಿ ಸ್ಕಾರ್ಪಿಯೋ ಎನ್ ಎಂಬ ಮಾಡೆಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತು.

ಇನ್ನು 2022 ರಲ್ಲಿ ಸ್ಕಾರ್ಪಿಯೋ ಎನ್ ಅನ್ನು ಮಾರುಕಟ್ಟೆಗೆ ತಂದಾಗ ಜನರಿಂದ ಭಾರೀ ಸ್ಪಂದನೆ ದೊರಕಿತ್ತು. ಈ ಮೂಲಕ ಭಾರತೀಯ ಎಸ್ಯುವಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಭಾರೀ ಅಲೆಯನ್ನು ಎಬ್ಬಿಸಿದೆ. ಸದ್ಯ ಭಾರತದಲ್ಲಿ ಸ್ಕಾರ್ಪಿಯೋ ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಮಾಡೆಲ್ಗಳು ಮಾರಾಟಕ್ಕೆ ಲಭ್ಯವಿದೆ.

ಇನ್ನು ಭಾರತದಲ್ಲಿ ಹೆಸರುವಾಸಿಯಾಗಿರುವ ಮಹೀಂದ್ರಾ ಬೊಲೇರೋ ಕಾರಿಗಿಂತಲೂ ಸ್ಕಾರ್ಪಿಯೋ ಮಾಡೆಲ್ಗಳು ಮುಂಚೂಣಿಯಲ್ಲಿದ್ದು ಇದು ಕಳೆದ ಮೇ ತಿಂಗಳಲ್ಲಿ ಸುಮಾರು 9318 ಯೂನಿಟ್ಗಳನ್ನು ಸೇಲ್ ಮಾಡುವ ಮೂಲಕ ಭಾರೀ ಸುದ್ಧಿ ಮಾಡಿತ್ತು. ಇನ್ನು ಈ ಕುರಿತಾಗಿ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಡೈರೆಕ್ಟರ್ ಮತ್ತು ಸಿಇಒ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವಿಂದು ಪುಣೆಯ ಚಕನ್ ಪ್ಲಾಂಟ್ ನಲ್ಲಿದ್ದು ಈ ವಿಶಿಷ್ಟ ಮೈಲುಗಲ್ಲನ್ನು ನಾವೆಲ್ಲರೂ ಸಂಭ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್ಯುವಿಯು ಸ್ಕಾರ್ಪಿಯೋ ಕ್ಲಾಸಿಕ್ ಆವೃತ್ತಿಗಿಂತ ಗಾತ್ರದಲ್ಲಿ ದೊಡ್ಡದಾಗಿದ್ದು ಇತ್ತೀಚೆಗೆ ಮಹೀಂದ್ರಾ ಕಾರು ಪ್ರಿಯರ ನೆಚ್ಚಿನ ಕಾರಾಗಿ ಬದಲಾಗಿದೆ.

ಇನ್ನು ಮಹೀಂದ್ರಾ ಸ್ಕಾರ್ಪಿಯೋ ಎನ್ 2.2 ಲೀಟರ್ ಡೀಸೆಲ್ ಇಂಜಿನ್ ಜೊತೆ ಬರುತ್ತಿದ್ದು, ಈ ಎಂಜಿನ್ ಸಹಾಯದಿಂದ ಸ್ಕಾರ್ಪಿಯೋ ಎನ್ 172 ಬಿಹೆಚ್ಪಿ ಪವರ್ ಮತ್ತು 370 ಎನ್ಎಮ್ ಟಾರ್ಕನ್ನು ಉತ್ಪಾದಿಸುತ್ತದೆ. ಇನ್ನು ಇದೇ ಕಾರಿನ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ವೇರಿಯಂಟ್ನ ಕಾರು ಸುಮಾರಯ 400 ಎನ್ಎಮ್ ಟಾರ್ಕನ್ನು ಉತ್ಪಾದಿಸುತ್ತದೆ.

ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.