ಮನೆ ಕ್ರೀಡೆ ಮೊದಲ ದಿನದ ಆಟದಲ್ಲಿ ಮೇಲುಗೈ ಸಾಧಿಸಿದ ಆಸೀಸ್

ಮೊದಲ ದಿನದ ಆಟದಲ್ಲಿ ಮೇಲುಗೈ ಸಾಧಿಸಿದ ಆಸೀಸ್

0

ಲಂಡನ್​: ಮೊದಲ ಟೆಸ್ಟ್‌ ನಲ್ಲಿ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.

Join Our Whatsapp Group

ಕಾಂಗರೂಗಳು ದಿನದಂತ್ಯ ಆಟಕ್ಕೆ ಓವರ್‌ ಗಳಲ್ಲಿ ಕೇವಲ 5 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ.

ಇಂಗ್ಲೆಂಡ್​ ಬೌಲರ್​ ಗಳನ್ನು ಸಮರ್ಥವಾಗಿ ಎದುರಿಸಿರುವ ಸ್ಟೀವ್ ಸ್ಮಿತ್ 85 ರನ್​ ಕಲೆಹಾಕಿ ಶತಕದ ಹಾದಿಯಲ್ಲಿದ್ದಾರೆ. 77 ರನ್​ ಕಲೆ ಹಾಕಿದ್ದ ಟ್ರಾವಿಸ್ ಹೆಡ್ ಉತ್ತಮವಾಗಿಯೇ ಪ್ರದರ್ಶನ ತೋರಿ ಪೆವಿಲಿಯನ್​ ಹಾದಿ ಹಿಡಿದರು.

ಇಂಗ್ಲೆಂಡ್​ ಬೌಲರ್‌ ಗಳ ಬೇವರಿಳಿಸಿದ ಡೇವಿಡ್ ವಾರ್ನರ್ 66 ರನ್ ​ಗಳಿಸಿ ಔಟಾದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಅವರು 47 ರನ್​ ಗಳಿಸಿ ಔಟಾಗುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. 70 ಎಸೆತಗಳನ್ನು ಎದುರಿಸಿರುವ ಉಸ್ಮಾನ್​ ಖವಾಜಾ ಕೇವಲ 17 ರನ್​ ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು.

ಆಟದ ಅಂತ್ಯದಲ್ಲಿ ಅಲೆಕ್ಸ್ ಕ್ಯಾರಿ 11 ರನ್​ ಗಳಿಸಿ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ಆಂಗ್ಲ ಬೌಲರ್​ಗಳ ಬೇವರಿಳಿಸಿದರು. ಆದರೆ ಖವಾಜಾ ಮಾತ್ರ ನಿಧಾನವಾಗಿಯೇ ಬ್ಯಾಟ್​ ಬೀಸುತ್ತಿದ್ದರು. ಕೇವಲ 66 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು. ಆಂಡರ್ಸನ್ ಮತ್ತು ಬ್ರಾಡ್ ಜೊತೆಗೆ ಓಲಿ ರಾಬಿನ್ಸನ್ ಆರಂಭಿಕರ ವಿಕೆಟ್​ ತೆಗೆಯುವಲ್ಲಿ ವಿಫಲಗೊಂಡರು.

ಆದರೆ, ಯುವ ವೇಗಿ ಜೋಶ್ ಟಂಗ್ ಇಂಗ್ಲೆಂಡ್‌ಗೆ ರಿಲೀಫ್ ನೀಡಿದರು.ಹೌದು, ಜೋಶ್​ ಟಂಗ್​ ಅವರು ಊಟದ ಮೊದಲು ಖವಾಜಾ ಮತ್ತು ವಿರಾಮದ ನಂತರ ವಾರ್ನರ್ ಅವರನ್ನು ಬೌಲ್ಡ್ ಮಾಡಿದರು. ಅದರಲ್ಲೂ ವಾರ್ನರ್ ಬೌಲ್ಡ್ ಮಾಡಿದ ಇನ್ಸ್ವಿಂಗರ್ ಮೊದಲ ದಿನದಾಟದ ಹೈಲೈಟ್ ಆಗಿದೆ. ಆದರೆ ಆ ಬಳಿಕ ಆಂಗ್ಲ ತಂಡ ಸಂಕಷ್ಟದ ಸನ್ನಿವೇಶಗಳನ್ನು ಎದುರಿಸಿತು. ಮೊದಲ ಟೆಸ್ಟ್ ನಲ್ಲಿ ವಿಫಲರಾಗಿದ್ದ ಸ್ಟೀವ್ ಸ್ಮಿತ್ ಈ ಬಾರಿ ಕ್ರೀಸ್ ​ನಲ್ಲಿ ಬೇರೂರಿದ್ದಾರೆ. ಲ್ಯಾಬುಸ್ಚಾಗ್ನೆ ಕೂಡ ಗಟ್ಟಿಯಾಗಿ ನಿಂತರು. ಈ ಜೋಡಿ ಮೂರನೇ ವಿಕೆಟ್‌ ಗೆ 102 ರನ್ ಕಲೆ ಹಾಕಿತು.

ಟೀ ವಿರಾಮದ ನಂತರ ರಾಬಿನ್ಸನ್ ಬೌಲಿಂಗ್ ಗೆ ಲ್ಯಾಬುಸ್ಚಾಗ್ನೆ ಔಟಾದರು. ಲ್ಯಾಬುಸ್ಚಾಗ್ನೆ​ ಔಟಾದ ಬಳಿಕ ಬಂದ ಹೆಡ್​ ಏಕದಿನ ಪಂದ್ಯದಂತೆ ಆಡಿ ರನ್‌ಗಳ ಮಹಾಪೂರವನ್ನೇ ಹರಿಸಿದರು. 48 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಅರ್ಧಶತಕ ಗಳಿಸಿದರು.

ಸ್ಮಿತ್ ಮತ್ತು ಹೆಡ್ ಮತ್ತೊಂದು ಶತಕದ ಜೊತೆಯಾಟವಾಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಅವರು ಒಂದೇ ಓವರ್‌ ನಲ್ಲಿ ಹೆಡ್ ಮತ್ತು ಗ್ರೀನ್ (0) ಅವರನ್ನು ಔಟ್ ಮಾಡಿದರು. ಆ ಬಳಿಕ ಸ್ಮಿತ್ ಕ್ಯಾರಿ ಜತೆಗೂಡಿ ಮತ್ತೊಂದು ವಿಕೆಟ್ ಪಡೆಯದಂತೆ ಎಚ್ಚರಿಕೆ ವಹಿಸಿದರು.

ದಿನದಂತ್ಯ ಆಟಕ್ಕೆ ಆಸ್ಟ್ರೇಲಿಯಾ ತಂಡ ತನ್ನ ಐದು ವಿಕೆಟ್ ​ಗಳನ್ನು ಕಳೆದುಕೊಂಡು 339 ರನ್​ಗಳನ್ನು ಕಲೆ ಹಾಕಿದೆ. ಇನ್ನು ಇಂಗ್ಲೆಂಡ್​ ಪರ ಜೋಶ್ ಟಂಗ್ ಮತ್ತು ಜೋ ರೂಟ್ ತಲಾ ಎರಡೆರಡು ವಿಕೆಟ್​ ಪಡೆದು ಮಿಂಚಿದರು.