ಮನೆ ಸುದ್ದಿ ಜಾಲ ನರೇಗಾ ಯೋಜನೆ ಪ್ರಚಾರವಾಹಿನಿಗೆ ಶಾಸಕ ಸಾ.ರಾ.ಮಹೇಶ್ ಚಾಲನೆ

ನರೇಗಾ ಯೋಜನೆ ಪ್ರಚಾರವಾಹಿನಿಗೆ ಶಾಸಕ ಸಾ.ರಾ.ಮಹೇಶ್ ಚಾಲನೆ

0

ಕೆ.ಆರ್.ನಗರ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತ ಉದ್ಯೋಗ ರಥ-ಪ್ರಚಾರವಾಹಿನಿಗೆ ಶಾಸಕರಾದ ಸಾ.ರಾ.ಮಹೇಶ್ ಚಾಲನೆ ನೀಡಿದರು.

ಶುಕ್ರವಾರ ತಾಲ್ಲೂಕಿನ ಅರ್ಜುನಹಳ್ಳಿ ಗ್ರಾಪಂ ಎದುರು ಉದ್ಯೋಗ ರಥ-ಪ್ರಚಾರ ವಾಹಿನಿಗೆ ಹಸಿರುನಿಶಾನೆ ತೋರುವ ಮೂಲಕ ಚಾಲನೆ ನೀಡಿ, ಮಾತನಾಡಿದ ಅವರು, ಪ್ರಚಾರವಾಹಿನಿಯು ತಾಲ್ಲೂಕಿನ 34 ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ತೆರಳಿ ಭಿತ್ತಿಪತ್ರಗಳನ್ನು ಹಂಚುವ ಮೂಲಕ ನರೇಗಾ ಯೋಜನೆ ಸೌಲಭ್ಯಗಳ ಕುರಿತು ಮಾಹಿತಿಯನ್ನು ಒದಗಿಸಲಿದೆ ಎಂದರು.

ನರೇಗಾ ಯೋಜನೆ ಮೂಲಕ ವೈಯಕ್ತಿಕ ಹಾಗೂ ಸಾಮೂದಾಯಿಕವಾಗಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸಾಧ್ಯವಿದ್ದು, ಸೌಲಭ್ಯಗಳನ್ನು ಪ್ರತಿಯೊಬ್ಬರು  ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ  ಕಾರ್ಯನಿರ್ವಾಹಕಅಧಿಕಾರಿ ಎಚ್.ಕೆ.ಸತೀಶ್, ನರೇಗಾ ಸಹಾಯಕ ನಿರ್ದೇಶಕರಾದ ಎಸ್.ನೇತ್ರಾವತಿ, ತಾಲ್ಲೂಕು ಐ.ಇ.ಸಿ ಸಂಯೋಜಕ ಡಿ.ರವಿಕುಮಾರ್  ಸೇರಿದಂತೆ  ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಕನಕಪುರದ ಬಂಡೆಗಳನ್ನು ಲೂಟಿ ಮಾಡುವ ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ: ಎಂ.ಪಿ ರೇಣುಕಾಚಾರ್ಯ
ಮುಂದಿನ ಲೇಖನವಾಹನ ಕಳವಾದ ಬಗ್ಗೆ ತಡವಾಗಿ ಮಾಹಿತಿ ನೀಡಿದರೆ ವಿಮೆ ನಿರಾಕರಿಸಿಸುವಂತಿಲ್ಲ: ಸುಪ್ರೀಂ